Uncategorized

ಕವಯತ್ರಿ ಆಶಾ ಕಡಪಟ್ಟಿ ನಿಧನ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ, ಕವಯತ್ರಿ ಆಶಾ ಕಡಪಟ್ಟಿ (82) ಅವರು ಗುರುವಾರ ನಿಧನರಾದರು. ಎರಡು ಕಾದಂಬರಿ, ಎಂಟು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಅವರು ರಚಿಸಿದ್ದಾರೆ.

ಆಶಾ ಅವರು ಸ್ಥಾಪಿಸಿದ ಜಿಲ್ಲಾ ಲೇಖಕಿಯರ ಸಂಘಕ್ಕೆ ಈಗ 25 ವರ್ಷಗಳಾಗಿವೆ.

ಸಂಘದ ಮೂಲಕ ಜಿಲ್ಲೆಯ ಹಲವು ಲೇಖಕಿಯರನ್ನು, ಕವಯತ್ರಿಯರನ್ನು, ಯುವ ಬರಹಗಾರರನ್ನು ಅವರು ಪ್ರೋತ್ಸಾಹಿಸಿದ್ದರು. ಸರ್ಕಾರದ ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನ ಸದಸ್ಯರೂ ಆಗಿದ್ದರು.

ಇಲ್ಲಿನ ಮರಾಠಾ ಲಘು ಪದಾತಿದಳದಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದ ಅವರ ಪತಿ ಬಾಲಚಂದ್ರ ಕಡಪಟ್ಟಿ ಅವರು ಐದು ವರ್ಷಗಳ ಹಿಂದೆ ನಿಧನರಾದರು. ಅವರಿಗೆ ಮಕ್ಕಳು ಇರಲಿಲ್ಲ. ಆಶಾ ಅವರ ಬಯಕೆಯಂತೆ ಅವರ ದೇಹವನ್ನು ಇಲ್ಲಿನ ಡಾ.ರವಿ ಪಾಟೀಲ ಅವರ ಆಸ್ಪತ್ರೆಗೆ ದಾನ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button