
ಹತ್ತು ತಿಂಗಳು ಕಳೆದರೂ ನಿವಾಸಿಗಳಿಗೆ ಸಿಗದ ಹಕ್ಕುಪತ್ರ
ಶಾಸಕ ಮಹಾಂತೇಶ ಕೌಜಲಗಿ ಕಚೇರಿ ಮುಂದೆ ಆಹೋರಾತ್ರಿ ಧರಣಿ ಎಚ್ಚರಿಕೆ
ಹತ್ತು ತಿಂಗಳು ಕಳೆದರೂ ನಿವಾಸಿಗಳಿಗೆ ಸಿಗದ ಹಕ್ಕುಪತ್ರ
ಶಾಸಕ ಮಹಾಂತೇಶ ಕೌಜಲಗಿ ಕಚೇರಿ ಮುಂದೆ ಆಹೋರಾತ್ರಿ ಧರಣಿ
ಕರ್ನಾಟಕ ಅಂಬೇಡ್ಕರ ಯುವ ಸೇನೆಯಿಂದ ಎಸಿ ಅವರಿಗೆ ಮನವಿ
ನಿವಾಸಿಗಳಿಂದ ತೀವ್ರ ಆಕ್ರೋಶ
ಬೈಲಹೊಂಗಲ ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳಿಗೆ ಹತ್ತು ತಿಂಗಳು ಕಳೆದರೂ ಹಕ್ಕು ಪತ್ರ ಸಿಗದ ಹಿನ್ನೆಲೆ ಶಾಸಕ ಮಹಾಂತೇಶ ಕೌಜಲಗಿ ಕಚೇರಿ ಮುಂದೆ ಆಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಬೈಲಹೊಂಗಲ ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳು ಹಲವಾರು ವರ್ಷಗಳಿಂದ ಮನೆಯ ಹಕ್ಕು ಪತ್ರಕ್ಕಾಗಿ ಪರದಾಡುತ್ತಿದ್ದು ಹಲವಾರು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷಿಸುತ್ತ ಬಂದಿದ್ದಾರೆ
ಇತ್ತೀಚೆಗೆ ಪ್ರತಿಭಟನೆ ನಡೆಸಿದಾಗ ಶಾಸಕ ಮಹಾಂತೇಶ್ ಕೌಜಲಗಿ ಅವರು ಆಗಮಿಸಿ ಶೀಘ್ರದಲ್ಲಿಯೇ ಹಕ್ಕುಪತ್ರಗಳನ್ನು ಕೊಡಿಸುವುದಾಗಿ ತಿಳಿಸಿದರು. ಇದೀಗ ಹಲವಾರು ತಿಂಗಳುಗಳು ಉರುಳಿದ್ದರೂ ಇನ್ನೂ ಹಕ್ಕು ಪತ್ರಗಳು ಸಿಕ್ಕಿಲ್ಲ. ಇದಕ್ಕಾಗಿ ಈ ಹಿಂದೆ 62 ದಿನಗಳ ಕಾಲ ಎಸಿ ಕಚೇರಿಯಾದರು ಪ್ರತಿಭಟನೆ ನಡೆಸಲಾಗಿತ್ತು.
ಆದರೂ ಯಾವುದೇ ರೀತಿಯ ಪರಿಣಾಮವಾಗಿಲ್ಲ , ಫಲ ಸಿಕ್ಕಿಲ್ಲ ಇದೀಗ ಶಾಸಕರು ಸಹ ಕೊಟ್ಟ ಮಾತನ್ನು ಮರೆತಿದ್ದು ಶೀಘ್ರದಲ್ಲೇ ಹಕ್ಕುಪತ್ರಗಳನ್ನು ಕೊಡದಿದ್ದರೆ ಶಾಸಕ ಮಹಾಂತೇಶ ಕೌಜಲಗಿ ಅವರ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದೆಂಬ ಎಚ್ಚರಿಕೆಯ ಕರ್ನಾಟಕ ಅಂಬೇಡ್ಕರ್ ಯುವ ಸೇನೆಯ ಪದಾಧಿಕಾರಿಗಳು ನೀಡಿದರು.