Uncategorized

ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ(ACF) ಕಿರಣ ಅಂಗಡಿಯವರಿಗೆ ಇಂದು ಲೋಕಾಯುಕ್ತ ಶಾಕ್

ಶಿವಮೊಗ್ಗ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯ ಧಾರವಾಡ ನಿವಾಸ ಸೇರಿ ಫಾರ್ಮ್ ಹೌಸ್ ಹಾಗೂ ಸಂಬಂಧಿ ನಿವಾಸದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡೂವ ಮೂಲಕ ಅಧಿಕಾರಿಗೆ ಶಾಕ್ ನೀಡಿದ್ದಾರೆ.
– ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ(ACF) ಕಿರಣ ಅಂಗಡಿಯವರಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದು, ಶಿವಮೊಗ್ಗದ ಕಚೇರಿ ಹಾಗೂ ಧಾರವಾಡದ ಮನೆ, ಫಾರ್ಮ್ ಹೌಸ್ ಜತೆಗೆ ಸಂಬಂಧಿ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪರವರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಶಿವಮೊಗ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ವೀರಬಸಪ್ಪ ಕುಶಲಾಪೂರ ಭಾಗಿಯಾಗಿದ್ದಾರೆ‌. ಎಸಿಎಫ್ ಅಧಿಕಾರಿಯ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿರೋ ಐಷಾರಾಮಿ ಮನೆ, ಫಾರ್ಮ್ ಹೌಸ್ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಪ್ಯಾಕ್ಟರಿ ಹೊಂದಿದ್ದಾರೆ. ಅಳ್ನಾವರ ರಸ್ತೆಯಲ್ಲಿರುವ ಫಾರ್ಮ್ ಹೌಸ್, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಪ್ಯಾಕ್ಟರಿ ಅಧಿಕಾರಿಗಳು ಈಗ ತಲಾಶ್ ಆರಂಭಿಸಿದ್ದಾರೆ. ಎಸಿಎಫ್ ಕಿರಣ್ ಸೋದರ ಮಾವನ ಮನೆ ಮೇಲೂ ಅಧಿಕಾರಿಗಳ ದಾಳಿ ನಡೆಸಿದ್ದು, ಒಟ್ಟು ನಾಲ್ಕು ಕಡೆ ಏಕಕಾಲದಲ್ಲಿ ಈ ದಾಳಿ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button