ಪ್ರೀತಿಸಿದ ಹುಡುಗಿ ನೋಡಲು ಬಂದಾಗ ಚಾಕುವಿನಿಂದ ಇರಿದು ಹಲ್ಲೆ…

ಬೆಂಗಳೂರಿನ ಉದ್ಯೋಗ ಮಾಡುತ್ತಿದ್ದ ಯುವಕನೋರ್ವ ಪ್ರೀತಿಸಿದ ಹುಡುಗಿ ನೋಡಲು ಬಂದಾಗ ಹುಡುಗಿಯ ಮನೆಯ ರೂಮ್ ನಲ್ಲಿ ಮಾಜಿ ಲವರ್ ಜೊತೆಗೆ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಮಾಜಿ ಲವರ್ ನಿಂದ ಮನಸೋ ಇಚ್ಚೆ ಚಾಕುವಿನಿಂದ ಇರಿದು ಹಲ್ಲೆ ಯತ್ನಿಸಿದ ಘಟನೆ ನಡೆದಿದ್ದು, ಬೆಳಗಾವಿಯ ಆಸ್ಪತ್ರೆಯ ಒಂದರಲ್ಲಿ ಹಲ್ಲೆಗೊಳಗಾದ ಪ್ರೇಮಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಆನಂದ ಕಳೆದ ಹದಿನೈದು ದಿನದಿಂದ ಶೋಭಾ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ.
ಆದರೆ ಶೋಭಾಗೂ ಇಬ್ಬರ ಜೊತೆಗೆ ಮದುವೆಯಾಗಿದ್ದು ಆತನಿಗೆ ಗೋತ್ತಿರಲಿಲ್ಲ. ನಿನ್ನೆ ರಾತ್ರಿ ಬೆಂಗಳೂರಿನಿಂದ ಮನೆಗೆ ಹೋದಾಗ ಶೋಭಾನ ಮಾಜಿ ಲವರ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾನೆ.
ಇನ್ನೂ ಪೊಲೀಸರಿಗೆ ವಿಚಾರಣೆ ಮಾಡಿದಾಗ ಶೋಭಾಗೆ ಈಗಾಗಲೇ ಎರಡೂ ಮದುವೆಯಾಗಿದೆ. ಆನಂದ ಏಕಾಏಕಿ ಮನೆಗೆ ಬಂದು ಶೋಭಾ ಮೇಲೆ ಚಾಕುವಿನಿಂದ ಕೈಗೆ ಹಲ್ಲೆ ಮಾಡಲು ಮುಂದಾದಾಗ ಶೋಭಾನೆ ಆನಂದಗೆ ಆತ್ಮರಕ್ಷಣೆಗೆ ಚಾಕು ಹಾಕಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದಿದ್ದಾರೆ.
ಒಟ್ಟಾರೆ ಎರಡೂ ಮದುವೆಯಾದ ಶೋಭಾ ಜೊತೆಗೆ ಲಿವಿಂಗ್ ಟು ಗೇದರ್ ನಲ್ಲಿದ್ದ ಆನಂದಗೆ ಶೋಭಾ ಸಂಬಂಧಿ ಎನ್ನುತ್ತಾನೆ.
ಶೋಭಾಗೆ ಮದುವೆಯಾಗಿದ್ದು ಗೊತ್ತಿರಲಿಲ್ಲವಾ, ಹಲ್ಲೆ ಮಾಡಿದ್ದು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.