ಬೆಳಗಾವಿ

ಬೆಳಗಾವಿ ಎಪಿಎಂಸಿ ಪೊಲೀಸರ ಮಿಂಚಿನ ಕಾರ್ಯಾಚರಣೆ… 7 ದಿನಗಳಲ್ಲಿ 7 ವರೆ ಲಕ್ಷದ ಚಿನ್ನಾಭರಣ ವಶ…

ಬೆಳಗಾವಿ:  ಮನೆಗಳ್ಳತನವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿ ಕೇವಲ 7 ದಿನಗಳಲ್ಲಿ ಕಳ್ಳನನ್ನು ಪತ್ತೆ ಹಚ್ಚಿ ಸುಮಾರು ಏಳುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯುವಲ್ಲಿ ಬೆಳಗಾವಿಯ ಎ.ಪಿ.ಎಂ.ಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಎ.ಪಿ.ಎಂ.ಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಆಝಮ್ ನಗರದ ಉಂಬ್ರಾನ ಅಬ್ದುಲಸತ್ತಾರ ಚಾಂದವಾಲೆ ಅವರು ತಮ್ಮ ಮನೆ ಕಳ್ಳತನವಾಗಿರುವ ಪ್ರಕರಣವನ್ನು ಏಪ್ರಿಲ್ 24 ರಂದು ಎ.ಪಿ.ಎಂ.ಸಿ ಠಾಣೆಯಲ್ಲಿ ದಾಖಲಿಸಿದ್ದರು.

ಸಹಾಯಕ ಪೊಲೀಸ್ ಆಯುಕ್ತರಾದ ಸದಾಶಿವ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಎಪಿಎಂಸಿ ಇನ್ಸಪೆಕ್ಟರ್ ಯು.ಎಸ್. ಅವಟಿ ಅವರ ನೇತೃತ್ವದ ತಂಡವು ಕಾರ್ಯಾಚರಣೆಯನ್ನು ನಡೆಸಿ, ಅದೇ ಆಝಮ್ ನಗರದ ಆರೋಪಿ ತೌಫಿಕಅಹ್ಮದ ಮುಗುಟಸಾಬ ಶಿಂಪಿ ಬಂಧಿಸಿದ್ದು, ವಿಚಾರಣೆಯ ವೇಳೆ ಕಳ್ಳತನದ ಆರೋಪವನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಈತನ ಬಳಿಯಿದ್ದ 7,78,673 ರೂಪಾಯಿ ಮೌಲ್ಯದ 82 ಗ್ರಾಂ ಚಿನ್ನಾಭರಣ ಮತ್ತು 50 ಗ್ರಾಂ ಬೆಳ್ಳಿಯ ಆಭರಣವನ್ನು ಜಪ್ತಿ ಮಾಡಲಾಗಿದೆ.

ಈ ಪ್ರಕರಣದಲ್ಲಿ ಎಪಿಎಮ್‌ಸಿ ಪೊಲೀಸ್ ಠಾಣಿಯ ಪಿಎಸ್‌ಐ, ಸಂತೋಷ ದಳವಾಯಿ, ಎಸ್ ಆರ್ ಮುತ್ತತ್ತಿ, ಡಿ ಸಿ ಸಾಗರ, ಬಸವರಾಜ ನರಗುಂದ, ಖಾದರಸಾಬ ಖಾನಮ್ಮನವರ, ಗೋವಿಂದಪ್ಪ ಪೂಜಾರ ಹಾಗೂ ಪೊಲೀಸ್ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ರಮೇಶ ಅಕ್ಕಿ, ಮಹಾದೇವ ಖಶೀದ ಹಾಗೂ ಸಿಬ್ಬಂದಿಯವರು ಪ್ರಸಂಶನೀಯ ಕೆಲಸ ಮಾಡಿದ್ದು ಸದರಿಯವರಿಗೆ ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಉಪಪೊಲೀಸ್ ಆಯುಕ್ತರು (ಕಾ.ಸು) ಬೆಳಗಾವಿ ಹಾಗೂ ಮಾನ್ಯ ಪೊಲೀಸ್ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button