ಬೆಂಗಳೂರು

ಜಾತಿ ನಿಂದನೆ ಹಾಗೂ ಬೆದರಿಕೆ ಆರೋಪದ ಮೇಲೆ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆ‌ರ್.

ಬೆಂಗಳೂರು: ಯಾವುದೇ ತಿಳಿವಳಿಕೆ ನೀಡದೇ ದಿನಗೂಲಿ ನೌಕರರ ಶೆಡ್‌ಗಳನ್ನ ನೆಲಸಮಗೊಳಿಸಿ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ.

ಸೋಮವಾರ ಬೆಳಗ್ಗೆ 11ಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ದಿನಗೂಲಿ ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿರುವ ಆರೋಪ ಮುನಿರತ್ನ ಅವರ ವಿರುದ್ಧ ಕೇಳಿ ಬಂದಿದ್ದು, ಶಾಸಕರು ಸೇರಿದಂತೆ ಏಳು ಜನರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ.

ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂನಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಶೆಡ್‌ಗಳನ್ನ ನಿರ್ಮಿಸಿಕೊಂಡು ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಏಕಾಏಕಿ ಶಾಸಕ ಮುನಿರತ್ನ ಮತ್ತು ಸಹಚರರು ಜೆಸಿಬಿಯೊಂದಿಗೆ ಬಂದು ಶೆಡ್‌ಗಳನ್ನ ನೆಲಸಮಗೊಳಿಸಿದರು. ಇದರಿಂದಾಗಿ ನಾವು ಕೂಡಿಟ್ಟ ಹಣ, ಚಿನ್ನ ಮಣ್ಣುಪಾಲು ಮಾಡಿದ್ದಾರೆ. ತಾವು ಮನವಿ ಮಡಿದರೂ ಸಹ ಜಾತಿ ನಿಂದನೆ ಮಾಡಿ, ಮಹಿಳೆಯರಿಗೆ ಚಪ್ಪಲಿ ಕಾಲಿನಿಂದ ಒದ್ದು ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ ಎಂದು ಎಫ್​ಐಆರ್​ನಲ್ಲಿ ತಿಳಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button