ರಾಜಕೀಯರಾಜ್ಯ

ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ಗೋಕಾಕ ಸಿಪಿಆಯ್,ಗ್ರಾಮೀಣ ಪಿಎಸ್ ಐ

ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ಗೋಕಾಕ ಸಿಪಿಆಯ್,ಗ್ರಾಮೀಣ ಪಿಎಸ್ ಐ

ಆರಂಭಗೊಂಡ ಸಕ್ಕರೆ ಕಾರ್ಖಾನೆಗಳು

ಕಬ್ಬು ಲಾರಿಗಳ ಸಾಗಾಟ

ಸುಗಮ ಸಂಚಾರಕ್ಕಾಗಿ ಅನುವು

ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ಗೋಕಾಕ ಪೊಲೀಸರು

ಸಕ್ಕರೆ ಕಾರ್ಖಾನೆಗಳು ಆರಂಭವಾಗಿದ್ದು, ಸುಗಮ ಸಂಚಾರಕ್ಕಾಗಿ ಗೋಕಾಕ ಪೊಲೀಸರು ರಸ್ತೆಗಿಳಿದಿದ್ದಾರೆ.

ಟ್ರ್ಯಾಕ್ಟರ ಡ್ರೈವರುಗಳಿಗೆ ಬಿಸಿ ಮುಟ್ಟಿಸಿ ಎಲ್ಲ ಟ್ರ್ಯಾಕ್ಟರ್ ಡ್ರೈವರ್ ಗಳಿಗೆ ನಿಯಮ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆ ಪ್ರಾರಂಭ ಆಗುತಿದ್ದಂತೆ ಕಟಾವು ಮಾಡಿದ ಕಬ್ಬನ್ನು ಟ್ರ್ಯಾಕ್ಟರ್ ಡ್ರೈವರುಗಳು ಟಬ್ಬಿಗಳಲ್ಲಿ ಮಿತಿ ಮಿರಿ ಹೆಚ್ಚು ಕಬ್ಬು ತುಂಬಿಕೊಂಡು ಹೋಗುತ್ತಿದ್ದರಿಂದ ಸಾರ್ವಜನಿಕರಿಗೆ ಹಾಗೂ ಬೈಕ್ ಸವಾರರಿಗೆ ಮತ್ತು ವಾಹನ ಸಂಚಾರರಿಗಷ್ಟೆ ಅಲ್ಲದೆ ಶಾಲಾ ವಿದ್ಯಾರ್ಥಿಗಳು ಕೂಡ ತೊಂದರೆ ಅನುಭವಿಸುವಂತಾಗಿದೆ.
ಇದನ್ನ ಅರಿತ ಗೋಕಾಕ ಹಿರಿಯ ಪೋಲಿಸ್ ಅಧಿಕಾರಿಗಳ ಮಾರ್ಗದರ್ಶನದಂತೆ CPI ಸುರೇಶ ಪವಾರ ಮತ್ತು ಗ್ರಾಮೀಣ PSI ಕಿರಣ ಮೊಹಿತೆ ಇವರು ಸಂಚಾರ ಸುಗಮಕ್ಕಾಗಿ ರಸ್ತೆಗಿಳಿದು ಟ್ರ್ಯಾಕ್ಟರ ಡ್ರೈವರುಗಳಿಗೆ ಬಿಸಿ ಮುಟ್ಟಿಸಿ ಎಲ್ಲ ಟ್ರ್ಯಾಕ್ಟರ್ ಡ್ರೈವರ್ ಗಳಿಗೆ ನಿಯಮ ಪಾಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಇಂದು ಮುಂಜಾನೆ ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದಲ್ಲಿ ಸಿ,ಪಿ,ಆಯ್, ಸುರೇಶ ಪವಾರ ಮತ್ತು ಪಿ,ಎಸ್,ಐ, ಕಿರಣ ಮೊಹಿತೆ ಇವರು ಶಿವಾಪುರ,
ಗೋಡಗೇರಿಯಿಂದ ತೆರಳುವ ಟ್ರ್ಯಾಕ್ಟರಗಳನ್ನು ನಿಲ್ಲಿಸಿ ಹಿಂದೆ ಮುಂದೆ ಸ್ವತಃ ಸಿಪಿಆಯ್ ಸುರೇಶ ಪವಾರ ರಿಪ್ಲಕ್ಟರ ಅಳವಡಿಸಿ,ಟೇಪ ರೆಕಾರ್ಡನಲ್ಲಿ ಹೆಚ್ಚು ಶಬ್ದ ಬಾರದಂತೆ ನೋಡಿಕೊಂಡು ಅದರ ಜೊತೆಯಲ್ಲಿ ಬದಿಯಲ್ಲಿ ಸಂಚಾರ ಮಾಡುವ ವಾಹನಗಳಿಗೆ ಕಬ್ಬು ತಾಗದಂತೆ ಕಟಾವು ಮಾಡಿ ಡಬ್ಬಿಯಲ್ಲಿ ತುಂಬಿಕೊಂಡು ಬರಲು ಸೂಚಿಸಿದರು.

ಪೊಲೀಸರ ಈ ಸಮಾಜಮುಖಿ
ಕಾರ್ಯವನ್ನು ಸ್ಥಳೀಯರು ಪ್ರಶಂಸಿಸಿದ್ದಾರೆ.ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ನಾಗೇಶ ದುರದುಂಡಿ,ದುಂಡೇಶ ಅಂತರಗಟ್ಟಿ, ಹನಮಂತ ಗೌಡಿ,ಬಿ,ಜಿ,ಕೊಣ್ಣೂರ ಕಾರ್ಯನಿರ್ವಹಿಸಿದರು

Related Articles

Leave a Reply

Your email address will not be published. Required fields are marked *

Back to top button