
ಬೆಳಗಾವಿ ತಹಶೀಲ್ದಾರ ಬಸವರಾಜ್ ನಾಗರಾಳ ಕರ್ತವ್ಯಕ್ಕೆ ಹಾಜರ್…
ಎಸ್ ಡಿ ಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣದ ಎ1 ಆರೋಪಿ
ಜಾಮೀನಿನ ಮೇಲೆ ಹೊರಗಿರುವ ತಹಶೀಲ್ದಾರರು
ಸಾವರ್ಜನಿಕ ವಲಯದಲ್ಲಿ ಆಕ್ರೋಶ
ಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ಎಸ್ ಡಿ ಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣದ ಎ1 ಆರೋಪಿಯಾಗಿದ್ದ ತಹಶೀಲ್ದಾರ ಬಸವರಾಜ್ ನಾಗರಾಳ ಇಂದು ಹೊಸ ವರ್ಷದ ಮೊದಲ ದಿನವೇ ಕರ್ತವ್ಯಕ್ಕೆ ಹಾಜರಾಗಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ನ.5 ರಂದು ಆತ್ಮಹತ್ಯೆ ಎಸ್ ಡಿಸಿ ರುದ್ರಣ್ಣ ಯಡವಣ್ಣನ್ನವರ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ತಹಶೀಲ್ದಾರ ಬಸವರಾಜ್ ನಾಗರಾಳ ಎರಡು ತಿಂಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಭಂಧಿಸಿದಂತೆ ತಹಶಿಲ್ದಾರರ ಮೇಲೆ ರುದ್ರಣ್ಣ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಆತ್ಮಹತ್ಯೆ ಪ್ರಕರಣದ ಬಳಿಕ ರುದ್ರಣ್ಣ ಕುಟುಂಬಸ್ಥರು ಹಾಗೂ ಜನವಿರೋಧದ ನಡುವೆ ಕರ್ತವ್ಯದಿಂದ ದೂರವಿದ್ದ ತಹಶೀಲ್ದಾರ ಬಸವರಾಜ್ ನಾಗರಾಳ ಜಾಮೀನಿನ ಮೇಲೆ ಮತ್ತೇ ಬಂದಿದ್ದು, ಹೊಸ ವರ್ಷದ ಮೊದಲನೇ ದಿನವೇ ತಹಶಿಲ್ದಾರರ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಒಂದೆಡೆ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದರೇ ಇನ್ನೊಂದಡೆ ಕುಟುಂಬಸ್ಥರು ನ್ಯಾಯಕ್ಕಾಗಿ ಅಲೆದಾಟ ನಡೆಸಿದ್ದಾರೆ. ಈ ನಡುವೆ ಕೆಲಸಕ್ಕೆ ಹಾಜರಾದ ತಹಶಿಲ್ದಾರ ವಿರುದ್ದ ಸಾರ್ವಜನಿಕರ ವಲಯದಲ್ಲಿ ಅಕ್ರೋಶ ವ್ಯಕ್ತವಾಗುತ್ತಿದೆ