ಜೈ ಮಹಾರಾಷ್ಟ್ರ ಘೋಷಣೆ ವಿರುದ್ಧ ಕ.ರ.ವೇ ಪ್ರತಿಭಟನೆ; ಮೇಯರ್ ರಾಜೀನಾಮೆಗೆ ಒತ್ತಾಯ

ಜೈ ಮಹಾರಾಷ್ಟ್ರ ಘೋಷಣೆ ವಿರುದ್ಧ ಕರುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟಿಸಿ ಶಾಸಕರ ಮೇಯರ್ ರಾಜೀನಾಮೆಗೆ ಒತ್ತಾಯ ಮಾಡಿದರು.
ಅನುಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಸಂದರ್ಭದಲ್ಲಿ ಜೈ ಮಹಾರಾಷ್ಟ್ರ ಘೋಷಣೆ ಕೂಗಿದ್ದು ಅಕ್ಷಮ್ಯ ಅದನ್ನು ಸಮರ್ಥಿಸಿರುವ ಶಾಸಕ ಹಾಗೂ ಮೇಯರ್ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರುನಾಡು ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟಿಸಲಾಯಿತು.
ಸ್ಥಳದಲ್ಲಿಯೇ ಇದ್ದ ಶಾಸಕರಾದ ಅಭಯ್ ಪಾಟೀಲ್ ಅವರು ಮೇಯರ್ ಸವಿತಾ ಕಾಂಬಳೆ ಅವರು ಘೋಷಣೆಯನ್ನು ಖಂಡಿಸದೆ ಸಮರ್ಥಿಸಿ ಚಪ್ಪಾಳೆ ತಟ್ಟಿದ್ದು ಕನ್ನಡಿಗರಿಗೆ ಮಾಡಿದ ದ್ರೋಹ ಕಾರಣ ಅವರು ತಕ್ಷಣವೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಕರುನಾಡು ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ಉತ್ತರ ಕರ್ನಾಟಕ ರಾಜ್ಯಾಧ್ಯಕ್ಷ ಮಂಜುನಾಥ ಜಲ್ಲಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು