ಬೆಳಗಾವಿ

ಬೆಳಗಾವಿಯಲ್ಲಿ ಎಂ ಫಾರ್ ಸೇವಾ ಸಂಸ್ಥೆಯ 25ನೇ ವಾರ್ಷಿಕೋತ್ಸವ.

ಬೆಳಗಾವಿ:ಎಮ ಫಾರ್ ಸೇವಾ ಸಂಸ್ಥೆಯ 25ನೇ ವಾರ್ಷಿಕೋತ್ಸವ ಸಮಾರಂಭದ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಅದ್ಭುತವಾದ ರಾಮ ಸಂಗೀತ ಕಾರ್ಯಕ್ರಮವನ್ನು ಗೋಗಟೆ ಕಾಲೇಜಿನ ವೇಣುಗೋಪಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಸುಪ್ರಸಿದ್ಧ ಸಂಗೀತ ಗಾಯಕಿ ಕುಮಾರಿ ಸೂರ್ಯ ಗಾಯತ್ರಿ ನಡೆಸಿಕೊಟ್ಟರು

ಪರಮಪೂಜ್ಯ ಶ್ರೀ ಗುರುಸಿದ್ಧ ಸ್ವಾಮೀಜಿ ಕಾರಂಜಿ ಮಠ. ಎಮ ಫಾರ್ ಸೇವಾ ಸಂಸ್ಥೆಯ ಆಯೋಜಕರಾದ ಶ್ರೀ ಚಿತ್ ಪ್ರಕಾಶ ಆನಂದ ಸ್ವಾಮೀಜಿ. ಶ್ರೀ ಬ್ರಹ್ಮ ಪರಮಾನಂದ ಸ್ವಾಮೀಜಿ ಜೈಪೂರ್. ಸ್ವಾಮಿನಿ ಸ್ವತ್ಮ ನಿಷ್ಠಾನಂದ ಸರಸ್ವತಿ ಸ್ವಾಮೀಜಿ ಧಾರವಾಡ. ಅಭಿನವ ವೆಂಕಟೇಶ ಮಹಾರಾಜರು ತೊಂಡಿ ಕಟ್ಟಿ. ಹಾಗೂ ಶ್ರೀನಿವಾಸ್ ರಾಮನ್ ಅಮೇರಿಕಾ. ಇವರ ಅಮೃತ ಹಸ್ತದಿಂದ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಶ್ರೀ ಚಿತ್ ಪ್ರಕಾಶಾನಂದ ಸ್ವಾಮೀಜಿ ಉದ್ಘಾಟನಾ ಪರ ನುಡಿಗಳಲ್ಲಿ ಎಮ್ ಫಾರ್ ಸೇವಾ ಸಂಸ್ಥೆಯ ದೀರ್ಘ ಸಮಾಜಸೇವೆಯನ್ನು ವಿವರಿಸುತ್ತಾ ಶ್ರೀ ದಯಾನಂದ ಸರಸ್ವತಿ ಸ್ವಾಮೀಜಿಯ ಬೋಧನೆಗಳನ್ನು ಆದರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದು ದೇಶದ ಹಕ್ಕು ಹಾಗೂ ಭವಿಷ್ಯದ ಕೇಂದ್ರಶಕ್ತಿಯನ್ನು ರೂಪಿಸುವುದು ಎಂದು ಹೇಳುತ್ತಾ ಕ್ರಾಂತಿ ಮಹಿಳಾ ಮಂಡಳದ ಸಮಾಜ ಹಾಗೂ ಮಹಿಳಾಪರ ಸೇವೆಗಳನ್ನು ವಿವರಿಸಿದರು.
ಎಮ ಫಾರ್ ಸೇವಾ ಚತ್ರಾಲಯದ ವಿದ್ಯಾರ್ಥಿಗಳ ಸ್ವಾಗತ ಗೀತೆ ಜೊತೆಗೆ ಕೇರಳದ ಕುಮಾರಿ ಸೂರ್ಯ ಗಾಯಿತ್ರಿ ಅವರು ರಾಮಂ ಭಜೆ ಮುಂತಾದ ಭಕ್ತಿ ಗೀತೆಗಳು ತಮ್ಮ ಹಾಡುಗಾರಿಕೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿಸಿದರು

ಕ್ರಾಂತಿ ಮಹಿಳಾ ಮಂಡಳ ಸಂಗೀತ ಪ್ರತಿಷ್ಠಾನದ ವತಿಯಿಂದ ಸೂರ್ಯ ಗಾಯತ್ರಿ ಅವರನ್ನು ಸನ್ಮಾನಿಸಲಾಯಿತು. ಎಮ್ ಫಾರ್ ಸೇವಾ ಸಂಸ್ಥೆ ಬೆಳಗಾವಿಯ ಸದಸ್ಯ ಮೋನಿಕಾ ಸಾವಂತ್ ಕಾರ್ಯಕ್ರಮವನ್ನು ನಿರೂಪಿಸಿದರು ಕಾಂತಿ ಮಹಿಳಾ ಮಂಡಳದ ಉಪಾಧ್ಯಕ್ಷೆ ತ್ರಿಶಲಾ ಪಾಯಪ್ನವರ್ ವಂದಿಸಿದರು ನಮ್ಮ ಮಂಡಳದ ಅಧ್ಯಕ್ಷ ಶ್ರೀಮತಿ ಮಂಗಲಾ ಮಠದ. ಕಾರ್ಯದರ್ಶಿ ಭಾರತಿ ರತ್ನಪಗೊಳ್ ಹಾಗೂ ಮಂಡಳದ ಬೋರ್ಡ್ ಮೆಂಬರ್ಸ್ ಗಳಾದ ಆಶಾ ನಿಲಜಗಿ. ಶೋಭಾ ಕಾಡನ್ನವರ್. ರತ್ನ ಶ್ರೀ ಗುಡೆರ್. ಮಮತಾ ಅಂಟಿನ್. ಗೀತಾ ಎಮ್ಮಿ. ರೇಣುಕಾ ಕಾಂಬ್ಳೆ. ಅನಿತಾ ಜಕ್ಕಣ್ಣವರ್ ಹಾಗೂ ನಮ್ಮ ಮಂಡಳದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button