Uncategorized
ಕ್ರೆಡಾಯ್ ಮಹಿಳಾ ವಿಭಾಗದವರ ಈ ಅಭಿವೃದ್ಧಿ ಯೋಜನೆ ಪ್ರಶಂಸನೀಯ

ಬೆಳಗಾವಿ ಕ್ರೆಡಾಯ್ (CREDAI) ಮಹಿಳಾ ವಿಭಾಗದವರು ಕುವೆಂಪು ನಗರದ ಕೆ.ಎಲ್.ಇ ಇಂಟರ್ನ್ಯಾಷನಲ್ ಸ್ಕೂಲ್ ವೃತ್ತವನ್ನು ಅಭಿವೃದ್ಧಿ ಮತ್ತು ಸೌಂದರ್ಯಿಕರಣಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ಅಭಿವೃದ್ಧಿ ಪಡಿಸಿರುವ ವೃತ್ತವನ್ನು ಉದ್ಘಾಟಿಸಿದೆ.
ಕ್ರೆಡಾಯ್ ಮಹಿಳಾ ವಿಭಾಗದವರ ಈ ಅಭಿವೃದ್ಧಿ ಯೋಜನೆ ಪ್ರಶಂಸನೀಯ ಮತ್ತು ಸ್ವಾಗತಾರ್ಹ, ವೃತ್ತದಲ್ಲಿ ಸ್ತ್ರೀಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಆಧುನಿಕ ಕೊಡುಗೆ ಸೂಚಿಸುವ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಒತ್ತಿ ಹೇಳುವ ಶಿಲ್ಪವನ್ನು ವೃತ್ತದೊಳಗೆ ಸ್ಥಾಪಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ.
ಈ ವೇಳೆ ಕರುಣಾ ಹಿರೇಮಠ, ದೀಪಾ ವಾಂಡಕರ್, ಕಾರ್ಪೋರೆಟರ್ ಸಂದೀಪ್ ಜೆ, ಜೋಷಿ ಮೆಡಮ್, ಯುವರಾಜ ಹುಲ್ಜಿ, ಆನಂದ ಕುಲಕರ್ಣಿ, ಪ್ರಶಾಂತ ವಾಂಡಕರ್ ಸೇರಿದಂತೆ ಕ್ರೆಡಾಯ್ ನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.