ಹುಕ್ಕೇರಿ
ಪಕ್ಕದ ಮನೆಯವರ ಜಾಗದಲ್ಲಿ ಆಟವಾಡಿದ್ದಕ್ಕೆ ಬಾಲಕಿ ಸೇರಿ ಕುಟುಂಬಸ್ಥರ ಮೇಲೆ ಹಲ್ಲೆ

ಹುಕ್ಕೇರಿ: ಪಕ್ಕದ ಮನೆಯವರ ಜಾಗದಲ್ಲಿ ಆಟವಾಡಿದ್ದಕ್ಕೆ ಬಾಲಕಿ ಸೇರಿ ಕುಟುಂಬಸ್ಥರ ಮೇಲೆ ಹಲ್ಲೆ.ಹುಕ್ಕೇರಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಘಟನೆ.
ಗಾಯತ್ರಿ ನಾಯಕ್(12) ಬಾಲಕಿ ಮೇಲೆ ಕಲ್ಲಿನಿಂದ ಹೊಡೆದು ಹಲ್ಲೆ.
ಮಗಳ ಮೇಲಿನ ಹಲ್ಲೆ ಪ್ರಶ್ನಿಸಿದ್ದಕ್ಕೆ ಮನೆ ಯಜಮಾನ ಮಾರುತಿ ನಾಯಕ್, ಪರಸಪ್ಪ ನಾಯಕ್ ಮೇಲೆಯೂ ಕಲ್ಲಿನಿಂದ ಹಲ್ಲೆ. ತಲೆ ಹಾಗೂ ಕಣ್ಣು ಮುಖಕ್ಕೆ ಗಂಭೀರವಾಗಿ ಗಾಯ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ.ಮಹಾಂತೇಶ್ ಪೂಜಾರಿ ಮತ್ತು ಕುಟುಂಬಸ್ಥರಿಂದ ಹಲ್ಲೆ ಆರೋಪ.ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.