ಬೆಳಗಾವಿ
ಬೆಳಗಾವಿಯ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿ “ಫೂಡ್ ಫೆಸ್ಟಿವಲ್”.

ಬೆಳಗಾವಿ: ಈ ಉತ್ಸವದಲ್ಲಿ, ಕಾಲೇಜು ವಿದ್ಯಾರ್ಥಿಗಳು ವಿವಿಧ ರಾಷ್ಟ್ರೀಯ ಮತ್ತು ಸ್ಥಳೀಯ ಖಾದ್ಯಗಳನ್ನೊಳಗೊಂಡ ಮಳಿಗೆಗಳನ್ನು ನಿರ್ಮಿಸಿ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಆಹಾರವನ್ನು ಮಾರಾಟ ಮಾಡಿದರು. ಅಲ್ಲದೇ ಆ ಆಹಾರದ ಬಗ್ಗೆಯೂ ಅವರು ಮಾಹಿತಿ ನೀಡಿದರು. ಅದರಲ್ಲಿ ಮಜ್ಜಿಗೆ, ಸೊಲಕಡಿ, ಘಾವನ್, ಆಲೂ ವಡಿ, ಝೂಣಕಾ ಭಾಕರ್, ದಹಿ ಭಾತ್ , ಮಿಸಲ್, ಕಾಂದಾ ಪೋಹೆ, ದಹಿಪೋಹೆ, ಜಿಗಳಿ, ಕೈರಿ, ಪಾನಿಪುರಿ, ಭೇಲ್, ಪಾವ್ ಭಾಜಿ, ಬೀಟ್ ಪೊಹೆ, ಬೀಟ್ ಸಲಾಡ್, ಸ್ಯಾಂಡ್‌ವಿಚ್‌ಗಳು, ವಡಾ ಪಾವ್, ಕೇಕ್, ಅಲಿಪಾಕ್, ಬಿಸ್ಕೀಟ್ ಚಾಟ್, ಸಿಹಿತಿಂಡಿಗಳು, ಚಾಟ್, ಪದಾರ್ಥಗಳಿದ್ದವು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಜೆ. ಮೊಳೆರಾಖಿ ಅವರು ಇಂತಹ ಫೂಡ್ ಫೆಸ್ಟಿವಲ್’ಗಳು ವಿದ್ಯಾರ್ಥಿಗಳಿಗೆ ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸುತ್ತವೆ. ಅಲ್ಲದೇ ಪಾಕಶಾಲೆ ಮತ್ತು ನಿರ್ವಹಣಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತವೆ ಎಂದರು.