ಬೆಳಗಾವಿ

8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಬೆಳಗಾವಿಯ ಈಜುಪಟುಗಳ ಸಾಧನೆ.

ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ರಲ್ಲಿ ಬೆಳಗಾವಿಯ ಈಜುಪಟುಗಳು ಸಾಧನೆಯನ್ನು ಮಾಡಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದ ರಾಮನಮಳಾದಲ್ಲಿ ವಿಜಯದುರ್ಗದ ಜೆಐಎಂ ಈಜು ಅಕಾಡೆಮಿಯ ವತಿಯಿಂದ 8ನೇ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆ 2025ನ್ನು ಇತ್ತಿಚೆಗೆ ಹಮ್ಮಿಕೊಳ್ಳಲಾಗಿತ್ತು.

ಶ್ರೀ ದುರ್ಗಾಮಾತಾ ಕಲಾ, ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಲ, ವಿಜಯದುರ್ಗ ಆಯೋಜಿಸಿದ್ದ 2 ಕಿ.ಮೀ. ಈಜು ಸ್ಪರ್ಧೆಯಲ್ಲಿ ಓಪನ್ ಸೀ/ಚಾನೆಲ್ ಈಜು ಸ್ಪರ್ಧೆಯಲ್ಲಿ ಅರುಣ್ ನಾಮದೇವ್ ಜಾಧವ್ ಬೆಳ್ಳಿ ಪದಕ ಮತ್ತು 2 ಕಿ.ಮೀ. ಈಜು ಸ್ಪರ್ಧೆಯಲ್ಲಿ ಮುಖೇಶ್ ಶಿಂಧೆ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇವರು ಎಬಿಬಿಎ ಕ್ಲಬ್ ಆಫ್ ಗೋವಾವೆಸ್’ ಈಜುಕೊಳದ ಸದಸ್ಯರಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button