
ಬಾಗಲಕೋಟೆ : ಹೊಸಪೇಟೆಯಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಾಕಿಸ್ತಾನ ಎಂದು ಹೇಳಿದ್ದನ್ನು ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರವಾಗಿ ಖಂಡಿಸಿದ್ದಾರೆ
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.ಖರ್ಗೆಗೆ ಕೇಂದ್ರ ಸಚಿವ ವಿ ಸೋಮಣ್ಣ ತಿರುಗೇಟು ನೀಡಿ ಖರ್ಗೆ ಸಾಹೇಬರು ಈ ರಾಷ್ಟ್ರದ ಒಬ್ಬ ನಾಯಕರು. ಅವರಿಗೆ ಏನು ಮಾತಾಡಬೇಕು ಅನ್ನೋದೆ ಅರ್ಥ ಆಗುವದಿಲ್ಲ ಅನಿಸುತ್ತದೆ. ಅವರು ನಿರಾಶರಾಗಿದ್ದಾರೆ. ಖರ್ಗೆ ಅವರ ಭಾವನೆ ಈ ತರಹ ಇದೆ ಅಂದಾಗ ಇದು ಒಳ್ಳೆಯದಲ್ಲ.
ನೀವು ಯಾರಿಗೋಸ್ಕರ, ಯಾರ ತೃಪ್ತಿಗೋಸ್ಕರ ಈ ಮಾತು ಹೇಳ್ತಿದಿರೊ ಗೊತ್ತಿಲ್ಲ.
ದೇಶ ಇದ್ರೆ ನಾವು.ನಿಮ್ಮ ಕಣ್ಣೆದುರೆ. ನಿಮ್ಮ ತಾಯಿ ಮತ್ತು ನಿಮ್ಮ ತಂಗಿ ಸೇರಿದಂತೆ ಕುಟುಂಬದ ಸಜೀವ ದಹನವನ್ನು ನೀವು ಮತ್ತು ನಿಮ್ಮ ತಂದೆ ಮರದ ಹಿಂದೆ ನಿಂತು ನೋಡಿದ ಒಂದು ಕಹಿ ಘಟನೆ ನೆನೆಸಿಕೊಂಡರೆ ಸಾಕು.
ಪಾಕಿಸ್ತಾನ ಹೆಸರು ಹೇಳೋದಕ್ಕೂ ನಿಮ್ಮ ಬಾಯಲ್ಲಿ ಬರಬಾರದು. ಯಾರನ್ನೋ ತೃಪ್ತಿ ಪಡಿಸೋದಕ್ಕೋಸ್ಕರ ಇತಿಹಾಸಲ್ಲಿ ಖರ್ಗೆಯವರು ಇಂಥವರಾ ಎನ್ನುವ ಕೆಳಹಂತಕ್ಕೆ ಇಳಿದಿರೋದು. ನನಗೆ ನೋವು ತಂದಿದೆ ಎಂದು ಸೋಮಣ್ಣ ತಮ್ಮ ಅಸಮಾಧಾನ ಹೊರ ಹಾಕಿದರು