
ಗೋಕಾಕ: ಸ್ವಾರ್ಥವಿಲ್ಲದೆ ಸಾರ್ಥಕ ಸೇವೆ ಮಾಡಿದ ಹಂಚಿನಾಳ ಶಿಕ್ಷಕರು ಶಿಕ್ಷಣ ಇಲಾಖೆಯಲ್ಲಿ ಕಳೆದ ೩೦ ವರ್ಷಗಳ ಕಾಲ ಸುದೀರ್ಘ ಸೇವೆ ಮಾಡಿ ನಿವೃತ್ತ ಹೊಂದಿರುವ ಅವರಿಗೆ ನಿವೃತ್ತ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು. ಅವರು ತಾಲೂಕಿನ ಶಿಂದಿಕುರಬೇಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕಾಂತ ಹಂಚಿನಾಳ ಅವರ ನಿವೃತ್ತ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭ ಹಾಗೂ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಪ್ರಯುಕ್ತ ಅಭಿನಂದನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕಿನ ನಲ್ಲಾನಟ್ಟಿ, ಘಟಪ್ರಭಾ, ಶಿಂದಿಕುರಬೇಟ ಗ್ರಾಮಗಳಲ್ಲಿ ಶಿಕ್ಷಕರಾಗಿ, ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ ಅವರು ಗ್ರಾಮಸ್ಥರ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಮತ್ತು ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರೆ, ಜನರ ಮೆಚ್ಚುಗೆಯನ್ನು ಗಳಿಸಿದ್ದಾರಲ್ಲದೇ ನಮ್ಮ ಶ್ರೀಮಠದ ಭಕ್ತರಾಗಿದ್ದಾರೆ ಎಂದು ಹೇಳಿದರು.
ಮೂಡಲಗಿ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಮಾವಿನಗಿಡದ ಮಾತನಾಡಿ ಶಿಕ್ಷಕರಾಗಿ ಮತ್ತು ಶಿಕ್ಷಕರ ಸಂಘ ದಲ್ಲಿ ಸಕ್ರೀಯವಾಗಿ ಸೇವೆ ಮಾಡಿದ್ದಾರೆ. ಎಲ್ಲರೊಂದಿಗೆ ನಗುನಗುತ್ತಲೇ ಸದಾ ಇರುವ ಶ್ರೀಕಾಂತ ಹಂಚಿನಾಳ ಸರ್ ಅವರು ದಕ್ಷ ಮತ್ತು ಪ್ರಾಮಾಣಿಕ ಶಿಕ್ಷಕರಾಗಿದ್ದರು ಎಂದು ಹೇಳಿದರು. ಶಾಲೆಯ ಪ್ರಭಾರ ಪ್ರಧಾನ ಗುರು ಆರ್.ಎಚ್.ತುಳಸಿಗೇರಿ ಮಾತನಾಡಿ ಹಂಚಿನಾಳ ಶಿಕ್ಷಕರು ಧೈರ್ಯ ಶಾಲಿಗಳು ಹಾಗೂ ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದಿದ್ದಾರೆ. ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದು ಹೇಳಿದರು.
ವೇದಿಕೆ ಮೇಲೆ ಪ್ರಭಾ ಶುಗರ್ಸ್ ನಿರ್ದೇಶಕ ಆರೀಫ್ ಪೀರಜಾದೆ,ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ದಯಾನಂದ ಕಳಸನ್ನವರ,ಶ್ರೀಧರ ಕಂಬಾರ,ಸಿಆರ್ ಪಿ ಸುಭಾಸ ಪಾಟೀಲ,ಎಸ್.ಬಿ.ಬಡಿಗೇರ,ಸಿ.ಎಂ.ಬಾವಿಮನಿ, ಜಿ.ಎಸ್.ಗೋಡೇರ,ಬಿ.ಎಸ್.ಮುಗಳಿ,ಕಿರಣ ಕೋಳಿ,ಗುರು ಕಡೇಲಿ,ನಿಂಗಪ್ಪ ಬಂಬಲಾಡಿ,ಜ್ಯೋತ್ತೆಪ್ಪ ಟಬಂತಿ,ಮಾರುತಿ ಜಾಧವ್,ಸಿದ್ಧಾರೂಢ ಕಂಬಾರ,ಪಿಡಿಒ ಸಾಯಿಶ್ವರಿ ಮೆಣಸಿನಕಾಯಿ,ದುರುಗಪ್ಪ ಬಂಡಿವಡ್ಡರ,ಶೇಖರ್ ಮಾನೆ, ಮಹಾಲಿಂಗಪ್ಪ ತಳಗೇರಿ,ಶಂಕರ ಕಟ್ಟಿಮನಿ,ಅಶೋಕ ಮೇತ್ರಿ,ನಾರಾಯಣ ಕದಮ,ಬಸವರಾಜ ಗೋಕಾಕ, ಎಡವೀನ್ ಪರಸನ್ನವರ,ಎಸ್.ಎಂ. ದಬಾಡಿ,ಆಸೀಫ್ ಪಟಾಣ,ವಿಠ್ಠಲ ಕರೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎ.ಎಸ್. ಸವದತ್ತಿ ಸ್ವಾಗತಿಸಿದರು. ಶ್ರೀಯಾ ಬಂಬಲಾಡಿ ನಿರೂಪಿಸಿದರು. ಪೂಜಾ ಮಲ್ಲಾಪುರ ವಂದಿಸಿದರು.


