ಖಾನಾಪುರ

  • ಹಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಾಬಲೇಶ್ವರ ಪಾಟೀಲ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಅಂಗೀಕಾರ.

    ಖಾನಾಪೂರ ತಾಲೂಕಿನ ಹಲಗಾ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾಬಲೇಶ್ವರ ಪಾಟೀಲ್ ವಿರುದ್ಧ ಸಲ್ಲಿಸಲಾಗಿದ್ದ ಅವಿಶ್ವಾಸ ಗೊತ್ತುವಳಿಯ ಮೇಲೆ ಇಂದು, ಮಾರ್ಚ್ 1, 2025 ರಂದು ಶನಿವಾರ ಮತದಾನ ನಡೆದು, ಅವಿಶ್ವಾಸ ಗೊತ್ತುವಳಿ ಅಂಗೀಕರಿಸಲ್ಪಟ್ಟಿತು. ಆದ್ದರಿಂದ, ಕಳೆದ ಕೆಲವು ದಿನಗಳಿಂದ ಅವಿಶ್ವಾಸ ನಿರ್ಣಯ ಅಂಗೀಕಾರವಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ನಡೆಯುತ್ತಿರುವ ಚರ್ಚೆಗೆ ಪೂರ್ಣ ವಿರಾಮ ನೀಡಿದೆ. ಹಲಗಾ ಗ್ರಾಮ ಪಂಚಾಯಿತಿಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗಿದೆ. ಅಲ್ಲದೆ, ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವಾಗ ಪಂಚಾಯತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣವನ್ನು ಉಲ್ಲೇಖಿಸಿ, ಹಲಗಾ ಗ್ರಾಮ ಪಂಚಾಯಿತಿ ಸದಸ್ಯರು ಹಲಗಾ…

    Read More »
  • ಕಸ ಗೂಡಿಸಿದ ಖಾನಾಪುರ ಎಂಎಲ್ಎ ಹಾಗೂ ಪ.ಪಂ ಅಧ್ಯಕ್ಷೆ.

    ಖಾನಾಪೂರ:  ಮಲಪ್ರಭಾ ನದಿ ದಂಡೆಯಲ್ಲಿ ಶಾಸಕ ವಿಠ್ಠಲ ಹಲಗೇಕರ ಅವರು ಪಟ್ಟಣ ಪಂಚಾಯಿತಿ ಪ್ರತಿನಿಧಿಗಳೊಂದಿಗೆ ಸೇರಿ ಕಸ ಗೂಡಿಸಿ ಸ್ವಚ್ಛಗೊಳಿಸಿದರು. ಮಲಪ್ರಭಾ ನದಿ ದಂಡೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಿದ ತ್ಯಾಜ್ಯ ಹಾಗೂ ಪ್ರವಾಸಿಗರು ಬಿಸಾಡಿದ ನೀರಿನ ಬಾಟಲ್ ಸಹಿತ ರಾಶಿಯಾಗಿ ಬಿದ್ದಿದ್ದ ಕಸವನ್ನು ಶಾಸಕ ವಿಠ್ಠಲ ಹಲಗೆಕರ್ ಅವರು ತಮ್ಮ ಕೈಯಿಂದಲೇ ಬುಟ್ಟಿಗೆ ತುಂಬಿದರು. ಅದರಂತೆಯೇ ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷೆ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಬುಟ್ಟಿಯಿಂದ ಕಸ ವಿಲೇವಾರಿ ಮಾಡಿದರು. ಪಟ್ಟದ ಪಂಚಾಯಿತಿ ಉಪಾಧ್ಯಕ್ಷೆ ಜಯಾ ಭುತಕಿ ಸದಸ್ಯ ಅಪ್ಪಯ್ಯ…

    Read More »
  • ಮಾಜಿ ಶಾಸಕ ದಿವಂಗತ ವಿ.ವೈ. ಚವಾಣ್ ಅವರ ಪತ್ನಿ ಅನ್ನಪೂರ್ಣ ಚವಾಣ್ ನಿಧನ.

    ಖಾನಾಪೂರದ ಸ್ಟೇಷನ್ ರಸ್ತೆಯ ನಿವಾಸಿ ಮತ್ತು ಮಾಜಿ ಶಾಸಕ ದಿವಂಗತ. ವಿ.ವೈ. ಚವಾಣ್ ಅವರ ಪತ್ನಿ ಅನ್ನಪೂರ್ಣ ವಿಠ್ಠಲರಾವ್ ಚವಾಣ್ (87 ವರ್ಷ), ಭಾನುವಾರ ಬೆಳಿಗ್ಗೆ 6.30 ಕ್ಕೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರು ನಾಲ್ಕು ಮಕ್ಕಳು, ಇಬ್ಬರು ವಿವಾಹಿತ ಹೆಣ್ಣುಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಅಗಲಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ. ವಿ.ವೈ. ಚವಾಣ್ ಸಾಹೇಬ್ ಅವರ ಪತ್ನಿ ತಮ್ಮ ಪತಿ ವಿ.ವೈ. ಚವಾಣ್ ಸಾಹೇಬ್ ಅವರೊಂದಿಗೆ ಮಹಾರಾಷ್ಟ್ರ ಸೀಮಾ ಚಳವಳಿಯಲ್ಲಿ…

    Read More »
  • ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಪೂಜೆ ಸಲ್ಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ

    ಖಾನಾಪೂರ : ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ನಿಮಿತ್ಯ ಅವರ ಪೋಟೋ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಪಟ್ಟಣದ ನಾಗರೀಕರಿಗೆ ಮಹಾರಾಜರ ಜಯಂತ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಜಯಾ ಭುತಕಿ,ಸದಸ್ಯ ಪ್ರಕಾಶ್ ಬೈಲೂಲಕರ, ನಾರಾಯಣ ಓಗಲೆ, ವಿನೋದ್ ಪಾಟೀಲ್ ಸೇರಿದಂತೆ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ವರ್ಗದವರಾದ ಪ್ರೇಮಾನಂದ ನಾಯ್ಕ, ಗಂಗಾಧರ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

    Read More »
  • ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ಆಚರಣೆ.

    ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಸಂತ ಸೇವಾಲಾಲ್ ಮಹಾರಾಜ್ ಜಯಂತಿ ನಿಮಿತ್ಯ ಪೋಟೋ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಉಪ ತಹಶೀಲ್ದಾರ್ ಕಲ್ಲಪ್ಪ ಕೋಲಕಾರ ಮತ್ತು ಸಂತ ಸೇವಾಲಾಲ್ ಮಹಾರಾಜ್ ಸಂಘದ ಅಧ್ಯಕ್ಷ ಯಮನಪ್ಪ ರಾಠೋಡ್ ಅವರು ಈ ಸಂದರ್ಭದಲ್ಲಿ ಬಾಲಬ್ರಮ್ಮಚಾರಿಗಳು, ಪವಾಡ ಪುರುಷರು , ಬಂಜಾರ ಕುಲಗುರು , ಸಾಮಾಜಿಕ ಹರಿಕಾರಕರು ಶ್ರೀ ಸಂತ ಸೇವಾಲಾಲ್ ಮಹಾರಾಜ್ ರ ಕುರಿತು ಗೌರವ ಪೂರ್ವಕ ನುಡಿಗಳು ಉಪಸ್ಥಿತ ಪಡಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿಯ ಇನ್ನಿತರ ಅಧಿಕಾರಿಗಳು ಸಂತ ಸೇವಾಲಾಲ್ ಮಹಾರಾಜ್ ಸಂಘದ ಪದಾಧಿಕಾರಿಗಳು, ಉಪಸ್ಥಿತರಿದ್ದರು…

    Read More »
  • ಸಣ್ಣಹೊಸೂರ -ಭಂಡರಗಾಳಿಯ ಶ್ರೀ ಲಕ್ಷ್ಮೀ ಜಾತ್ರೆ ಉತ್ಸಾಹದಿಂದ ಆರಂಭ.

    ಖಾನಾಪೂರ: ತಾಲೂಕಿನ ಸಣ್ಣಹೊಸೂರ -ಭಂಡರಗಾಳಿ ಗ್ರಾಮದ ಶ್ರೀ ಲಕ್ಷ್ಮೀ ಜಾತ್ರೆಯು ಬೆಳ್ಳಿಗೆ ಉತ್ಸಾಹದಿಂದ ಆರಂಭಗೊಂಡಿತು.ಇಂದು ಖಾನಾಪೂರ ತಾಲೂಕಿನಲ್ಲಿ ಎರಡು ಗ್ರಾಮಗಳ ಶ್ರೀ ಮಹಾ ಲಕ್ಷ್ಮೀ ಜಾತ್ರೆಯು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಖಾನಾಪೂರ ತಾಲೂಕಿನ ಜನತೆ ಬೆಳ್ಳಿಗೆಯಿಂದಲ್ಲೇ ಉತ್ಸಾಹದ ವಾತಾವರಣದಲ್ಲಿದರು.

    Read More »
  • ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಖಾನಾಪೂರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ

    ಖಾನಾಪೂರ: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಮೀನಾಕ್ಷಿ ಪ್ರಕಾಶ್ ಬೈಲೂರಕರ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಸತ್ಕರಿಸಿ ಆರ್ಶಿವಾದ ಪಡೆದುಕೊಂಡು ಅಭಿವೃದ್ಧಿಗೆ ಸಹಕರಿಸಲು ಕೋರಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಕಾಶ್ ಬೈಲೂರಕರ, ಅಪ್ಪಯ್ಯ ಕೊಡೋಳ್ಳಿ,ಮಜಹರ್ ಖಾನಾಪೂರಿ, ರಫೀಕ್ ವಾರಿಮನಿ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.

    Read More »
  • ಸೌರ ವಿದ್ಯುತ್ ಸರಿಯಾಗಿ ಪೂರೈಕೆಯಾಗಿದ್ದರೇ ಹೆಸ್ಕಾಂ ಕಚೇರಿಗೆ ಮುತ್ತಿಗೆ; ಮೆಂಡಿಲ್ ಗ್ರಾಮಸ್ಥರ ಎಚ್ಚರಿಕೆ…

    ಶನಿವಾರದೊಳಗೆ ಸೌರ ವಿದ್ಯುತ್ ಸರಿಯಾಗಿ ಪೂರೈಕೆಯಾಗಿದ್ದರೇ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಖಾನಾಪೂರ ತಾಲೂಕಿನ ಮೆಂಡಿಲ್ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಮೆಂಡಿಲ್ ಗ್ರಾಮದಲ್ಲಿ ಸೌರ ವಿದ್ಯುತ್ ಸರಬರಾಜು ವ್ಯತ್ಯಯ ಗೊಂಡಿದ್ದು,ಖಾನಾಪೂರ ತಾಲೂಕಿನ ಮೆಂಡಿಲ್ ಗ್ರಾಮಸ್ಥರು ಕಳೆದ ಎಂಟು ತಿಂಗಳಿನಿಂದ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಹೆಸ್ಕಾಂ ಸಮಸ್ಯೆ ನಿವಾರಣೆ ಮಾಡುವುದರಲ್ಲಿ ವಿಫಲವಾಗಿದೆ. ಇದರಿಂದ ಬೇಸತ್ತು ಮೆಂಡಿಲ್ ಗ್ರಾಮಸ್ಥರು ಖಾನಾಪೂರ ಹೆಸ್ಕಾಂ ಇಲಾಖೆಯ ಕಚೇರಿಗೆ ಭೇಟಿ ನೀಡಿ, ತಮ್ಮ ಸಮಸ್ಯೆಯನ್ನು ಬರುವ ಶನಿವಾರದೊಳಗೆ ನಮ್ಮ ಪರಿಹರಿಸಿ ಸೌರ ವಿದ್ಯುತ್ ಸರಿಯಾಗಿ ಪೂರೈಕೆಗೆ ಆಗದಿದ್ರೆ ಹೆಸ್ಕಾಂ…

    Read More »
  • ಹೆಸ್ಕಾಂ ಕಚೇರಿಯ ಪೀಠೋಪಕರಣ ಜಪ್ತಿ

    ಖಾನಾಪುರ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯ ನೀಡಿದ ಆದೇಶ ಉಲ್ಲಂಘಿಸಿದ ಆರೋಪದಡಿ ಶುಕ್ರವಾರ ಪಟ್ಟಣದ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಕಚೇರಿಯ ಕಂಪ್ಯೂಟರ್, ಪ್ರಿಂಟರ್, ಕುರ್ಚಿ, ಮೇಜು ಮತ್ತಿತರ ಪೀಠೋಪಕರಣಗಳನ್ನು ಮತ್ತು ಕಚೇರಿ ವಾಹನವನ್ನು ನ್ಯಾಯಾಲಯದ ಸಿಬ್ಬಂದಿ ಜಪ್ತಿ ಮಾಡಿದರು. ತಾಲ್ಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಈರಣ್ಣ ಸಣ್ಣಕ್ಕಿ, ಈರಪ್ಪ ದಾಸ್ತಿಕೊಪ್ಪ, ಸಿದ್ಧಯ್ಯ ಪೂಜೇರಿ ಮತ್ತು ಹಿರೇಹಟ್ಟಿಹೊಳಿಯ ಬಾಬು ಪಟಕಾಳ ಎಂಬ ರೈತರ ಕಬ್ಬು 2016ರಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದಾಗಿ ಸುಟ್ಟಿತ್ತು. ತಮಗಾದ ನಷ್ಟಕ್ಕೆ ಹೆಸ್ಕಾಂನಿಂದ ಪರಿಹಾರ ದೊರಕಿಸಿಕೊಡುವಂತೆ ರೈತರು ನ್ಯಾಯಾಲಯದ ಮೊರೆ…

    Read More »
Back to top button