ದಾವಣಗೆರೆ

  • ಫಲಾನುಭವಿಗಳ ಸುರಕ್ಷತೆಗೆ ಹೆಚ್ಚಿನ ನಿಗಾ ವಹಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ.

    ಹರಿಹರ (ದಾವಣಗೆರೆ): ಮೇ 20 ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸರ್ಕಾರದ ಎರಡನೇ ವರ್ಷದ ಸಂಭ್ರಮಾಚರಣೆ ಹಾಗೂ ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹರಿಹರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಸಚಿವರು, ಆಹಾರ, ಔಷಧೋಪಚಾರ, ಕುಡಿಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ತಿಳಿಸಿದರು. ಫಲಾನುಭವಿಗಳನ್ನು ಮನೆಯ ಸದಸ್ಯರಂತೆ ಕಂಡು ಅವರಿಗೆ…

    Read More »
  • ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ 3.6KG ಬಂಗಾರ ಕಳ್ಳತನ

    ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕಿನಲ್ಲಿಯೇ ಕೆಜಿಗಟ್ಟಲೇ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ ಬ್ಯಾಂಕ್ ನೌಕರ ಕಂಬಿ ಎಣಿಸುತ್ತಿದ್ದಾನೆ‌. ಬ್ಯಾಂಕಿನ ಗೋಲ್ಡ್ ಲೋನ್ ಆಫೀಸರ್ ಆಗಿ ಕೆಲಸ ಮಾಡ್ತಿದ್ದ ಆರೋಪಿ, ಚಿನ್ನ ಕದ್ದು ಬೇರೆ ಬ್ಯಾಂಕ್​​​ನಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡಿದ್ದಾನೆ.‌ ಬ್ಯಾಂಕ್ ಅಲ್ಲಿ ವಾರ್ಷಿಕ ಲೆಕ್ಕಚಾರ ಮಾಡುವ ವೇಳೆ ಚಿನ್ನ ಕಮ್ಮಿ ಬಂದಿರುವುದು ಗೊತ್ತಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ದಾವಣಗೆರೆ ಪೊಲೀಸರು ಆರೋಪಿ ಬ್ಯಾಂಕ್ ನೌಕರ ಸಂಜಯ್ ಟಿ.ಪಿ ಅವರನ್ನು ಬಂಧಿಸಿದ್ದಾರೆ. 2.61 ಕೋಟಿ…

    Read More »
  • ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಭರ್ಜರಿ ಬೇಟೆ..

    ದಾವಣಗೆರೆ : ನ್ಯಾಮತಿ ಬ್ಯಾಂಕ್ ಕಳ್ಳತನದ 06 ಆರೋಪಿತರನ್ನು ಬಂಧಿಸಿ, ಸುಮಾರು 15.30 ಕೋಟಿ ಮೌಲ್ಯದ 17.1 ಕೆಜಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾನ್ಯ ಐಜಿಪಿ ಪೂರ್ವ ವಲಯ ರವರಾದ ಡಾ. ರವಿಕಾಂತೇಗೌಡ ಐಪಿಎಸ್ ರವರು ಹಾಗೂ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಈ ಸಂಧರ್ಭದಲ್ಲಿ ಪತ್ತೆ ಕಾರ್ಯ ತಂಡವನ್ನು ಅಭಿನಂದಿಸಿರುತ್ತಾರೆ. ಈ ಸಂಧರ್ಭದಲ್ಲಿ ಪತ್ತೆಕಾರ್ಯ ತಂಡದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು

    Read More »
  • ಕೃಷಿಗೆ 7 ತಾಸು ವಿದ್ಯುತ್ ಪೂರೈಕೆಗೆ ಸರ್ಕಾರ ಬದ್ದ: ಇಂಧನ ಸಚಿವ ಕೆ.ಜೆ.ಜಾರ್ಜ್

    ದಾವಣಗೆರೆ : ಕೃಷಿ ಪಂಪ್ ಸೆಟ್ ಗಳಿಗೆ ದಿನದ 7 ತಾಸು ತ್ರಿ ಫೇಸ್ ಹಾಗೂ ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಸುವುದು ಸರ್ಕಾರದ ನೀತಿಯಾಗಿದ್ದು, ಇದಕ್ಕೆ ಬದ್ದವಾಗಿ ವಿದ್ಯುತ್ ನೀಡಲಾಗುತ್ತಿದೆ ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ವಿದ್ಯುತ್ ಕೊರತೆ ಇಲ್ಲ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಕೆಲವು ಪ್ರದೇಗಳಲ್ಲಿ ನಿರ್ವಹಣಾ…

    Read More »
  • ಪೂಜೆ ಮಾಡುವ ನೆಪದಲ್ಲಿ ಚಿನ್ನಾಭರಣ ಲಪಟಾಯಿಸಿದ್ದಖದಿಮರು ಪೊಲೀಸರ ಬಲೆಗೆ.

    ದಾವಣಗೆರೆ: ಆರೋಪಿಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಶಶಿಕಲಾ ಎಂಬವರ ಹಣಕಾಸಿನ ಸಮಸ್ಯೆ ಅರಿತು ಪೂಜೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ಹೋಗಿದ್ದರು. ಸಂಜೆ 4 ರಿಂದ 6 ಗಂಟೆ ವೇಳೆಗೆ ಪೂಜೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಪೂಜೆ ವೇಳೆ ಚಿನ್ನಾಭರಣ ಹಾಗೂ ನಗದು ಇಡುವಂತೆ ಹೇಳಿದ್ದರು. ಅವರು ಹೇಳಿದಂತೆ ಶಶಿಕಲಾ ಹಾಗೂ ಆಕೆಯ ಕುಟುಂಬಸ್ಥರು ಪೂಜೆ ವೇಳೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಇರಿಸಿದ್ದರು. ಈ ವೇಳೆ ಆರೋಪಿಗಳು ಶಶಿಕಲಾ ಕುಟುಂಬದವರನ್ನು ಯಾಮಾರಿಸಿ ಚಿನ್ನ ಹಾಗೂ ಬೆಳ್ಳಿಯನ್ನು ಎಗರಿಸಿದ್ದರು ಪೂಜೆ ಮಾಡುವ…

    Read More »
  • ಜಾತಿಜನಗಣತಿ ವರದಿ ಜಾರಿಗೊಳಿಸಿ ವಂಚಿತ ಸಮಾಜಕ್ಕೆ ನಾಯ್ಯ ದೊರಕಿಸಲು ಸರ್ಕಾರ ಬದ್ಧ; ಗೃಹ ಸಚಿವ ಜಿ.ಪರಮೇಶ್ವ

    ದಾವಣಗೆರೆ: ಸೌಲಭ್ಯಗಳಿಂದ ವಂಚಿತ ಸಮಾಜಗಳಿಗೆ ನ್ಯಾಯ ದೊರಕಿಸುವ ಉದ್ಧೇಶದಿಂದ ಸುಮಾರು 160 ಕೋಟಿ ವೆಚ್ಚದಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಸರ್ಕಾರ ಜಾರಿ ಮಾಡಲು ಬದ್ಧವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ನುಡಿದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ರಾಜ್ಯಮಟ್ಟದ 7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಜಾತಿ ಜನಗಣತಿ ವಿಚಾರ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಹಲವರು ರಾಜಕೀಯ ವಿಚಾರ ಎನ್ನುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯನವರು ಸುಮಾರು 160…

    Read More »
  • ಮದುವೆ ಮನೆಗೆ ತೆರಳುತ್ತಿದ್ದ ಇಬ್ಬರ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲೆ ಸಾವು

    ದಾವಣಗೆರೆ: ದ್ವಿಚಕ್ರ ವಾಹನದಲ್ಲಿ ಮದುವೆ ಮನೆಗೆ ತೆರಳುತ್ತಿದ್ದ ಇಬ್ಬರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಆರನೇ ಮೈಲಿಗ್ಗಲು (ತರಳಬಾಳು ನಗರ) ಗ್ರಾಮದಲ್ಲಿ ತಡರಾತ್ರಿ ನಡೆಯಿತು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರ ಮೇಲೆ ಖಾಸಗಿ ಬಸ್ ಹರಿದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹದಡಿ ಗ್ರಾಮದ ರಾಜು (38) ಮತ್ತು ರಾಮಪ್ಪ (40) ಮೃತರೆಂದು ಗುರುತಿಸಲಾಗಿದೆ. ಮೃತದೇಹಗಳನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹದಡಿ ಗ್ರಾಮದಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ದಾವಣಗೆರೆ ಕಡೆಯಿಂದ ಚನ್ನಗಿರಿ ಕಡೆ ಸಂಚರಿಸುತ್ತಿದ್ದ ಬಸ್ ಡಿಕ್ಕಿಯಾಗಿ, ಬಳಿಕ ಮನೆಗೆ…

    Read More »
  • ರಾಷ್ಟ್ರೀಯ ಹೆಣ್ಣುಮಕ್ಕಳ ದಿನದಂದೇ ಸರ್ಕಾರಿ ಆಸ್ಪತ್ರೆಗಳಲ್ಲಿ 14 ಹೆಣ್ಣುಮಕ್ಕಳ ಜನನ

    ದಾವಣಗೆರೆ: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ. ಭಾರತದಲ್ಲಿ ಹೆಣ್ಣು ಮಗು ಎದುರಿಸುತ್ತಿರುವ ಶಿಕ್ಷಣ, ಪೋಷಣೆ, ಬಾಲ್ಯವಿವಾಹ, ಕಾನೂನು ಹಕ್ಕುಗಳು ಮತ್ತು ವೈದ್ಯಕೀಯ ಆರೈಕೆ, ರಕ್ಷಣೆ, ಗೌರವದಂತಹ ಸಮಸ್ಯೆಗಳ ಜಾಗೃತಿಯನ್ನು ಉತ್ತೇಜಿಸುವುದೇ ಹೆಣ್ಣು ಮಕ್ಕಳ ದಿನದ ಉದ್ದೇಶ. ಇಂತಹ ಸಂಭ್ರಮದ ದಿನದಂದೇ ದಾವಣಗೆರೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 14 ಹೆಣ್ಣುಮಕ್ಕಳ ಜನನವಾಗಿದ್ದು, ಆಸ್ಪತ್ರೆಗಳಲ್ಲಿ ಸಂಭ್ರಮ ಮನೆ ಮಾಡಿದೆ. ಜ. 24ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಶುಭ ದಿನದಂದು ಜನಿಸಿದ ಹೆಣ್ಣು ಮಗುವಿಗೆ ಆರೋಗ್ಯ ಇಲಾಖೆಯಿಂದ ಭರ್ಜರಿ ಗಿಫ್ಟ್ ನೀಡಲಾಗಿದೆ.…

    Read More »
  • ಸಿದ್ಧಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ  ಅವರನ್ನು ರಾಷ್ಟ್ರೀಯ ಸಂತ ಎಂದು ಘೋಷಣೆ ಮಾಡಲು ಆಗ್ರಹ.

    ದಾವಣಗೆರೆ:  ಸಿದ್ಧಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ  ಅವರನ್ನು ರಾಷ್ಟ್ರೀಯ ಸಂತ ಎಂದು ಘೋಷಣೆ ಮಾಡಲಿ ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ರಾಷ್ಟ್ರಪತಿ ಗಾಂಧೀಜಿ, ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂಬ ರೀತಿಯಲ್ಲಿ ಸಿದ್ಧಗಂಗಾ ಶ್ರೀ ರಾಷ್ಟ್ರೀಯ ಸಂತ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಲಿ ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ನಡೆದಾಡುವ ದೇವರು, ಕಾಯಕ ಯೋಗಿ, ದೇಶದಲ್ಲಿ‌ ತ್ರಿವಿಧ ದಾಸೋಹಿ ಎಂದೇ ಸಿದ್ಧಗಂಗಾ ಶ್ರೀಗಳು ಪ್ರಸಿದ್ದಿ‌ ಪಡೆದವರು‌. ಇದೇ ಕಾರಣಕ್ಕೆ…

    Read More »
  • ಪತ್ನಿಯನ್ನು ಪತಿಯೇ ಅಪಹರಿಸಿರುವ ಘಟನೆ;ತಡವಾಗಿ ಬೆಳಕಿಗೆ

    ದಾವಣಗೆರೆ: ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಹಾಡಹಗಲೇ ಸಂಬಂಧಿಕರ ಮನೆಯಲ್ಲಿದ್ದ ಪತ್ನಿಯನ್ನು ಪತಿಯೇ ಅಪಹರಿಸಿರುವ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪತ್ನಿ ಅನುಂಧತಿಯನ್ನು ಪತಿ ಕಾರ್ತಿಕ್ ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ.‌ ಅಪಹರಣದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನರಸಿಪುರ ಗ್ರಾಮದ ಕಾರ್ತಿಕ್ ಜೊತೆ ಅನುಂಧತಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗು ಇದೆ. ಆರು…

    Read More »
Back to top button