ರಾಜಕೀಯರಾಜ್ಯ

ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ

ಶಾಂತಿ ಸೌಹಾರ್ದ ಯುತವಾಗಿ ಮೊಹರಂ ಹಬ್ಬ ಆಚರಿಸಿ: ಸಿ ಪಿ ಐ ಮೊಹಮ್ಮದ ಫಸಿವುದ್ದೀನ

ತಾಳಿಕೋಟಿ: ಮುಸ್ಲಿಂ ಸಮಾಜದ ಪವಿತ್ರ ಹಬ್ಬವಾದ ಮೊಹರಂ ನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಬೇಕೆಂದು ಸಿ ಪಿ ಐ ಮೊಹಮ್ಮದ ಫಸಿವುದ್ದೀನ ಹೇಳಿದರು.

ಸೋಮವಾರ ನಗರದ ತಾಳಿಕೋಟಿ ಪೊಲೀಸ್ ಠಾಣಾ ಅವರಣದಲ್ಲಿ ಹಮ್ಮಿಕೊಂಡಿದ್ದ ಮೊಹರo ಹಬ್ಬದ ಪ್ರಯುಕ್ತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಬ್ಬ ಆಚರಿಸುವಾಗ ಬೇರೆಯವರಿಗೆ ತೊಂದರೆಯಾಗಬಾರದು.

ಸರಕಾರದ ಆದೇಶದಂತೆ ಸಮಾಜದವರಿಗೆ ತೊಂದರೆಯಾಗದಂತೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಹಬ್ಬ ಆಚರಿಸಿಸಬೇಕು. ಕಾನೂನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಮುಖಂಡರಾದ ಪ್ರಭುಗೌಡ ಮದರಕಲ ಗ್ರಾಮೀಣ ಪ್ರದೇಶದಲ್ಲಿ ಮೊಹರಂ ಹಬ್ಬ ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಆಚರಿಸುತ್ತಾರೆ ಈ ಧಾರ್ಮಿಕ ಹಬ್ಬಗಳಿಗೆ ತನ್ನದೇ ಆದ ಮಹತ್ವ ಇದ್ದು ಎಲ್ಲರೂ ಸೇರಿ ಸಹೋದರತ್ವ ಬೆಳೆಯಲಿ ಎಂಬುದು ಅರ್ಥವಾಗಿದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಸಿದ್ದನಗೌಡ ಪಾಟೀಲ್ ನಾವದಗಿ, ನಿರಂಜನಶಾ ಮಕಾಂದರ, ಶಮ್ಸುದ್ದಿನ್ ನಾಲಬಂದ, ಇಮಾಮಸಾಬ ಕಾಳಗಿ,ಡಿ ವಿ ಪಾಟೀಲ್, ಅಣ್ಣಪ್ಪ ಜಗತಾಪ, ಮಂಜುರ ಬೇಪಾರಿ, ಮುದ್ದು ಪಟೇಲ್, ಹುಸೇನಸಾಬ್ ಜಮಾದಾರ್, ಶಫೀಕ್ ಇನಾಂದಾರ, ಅಸಿಫ್ ಕೆಂಭಾವಿ, ಹಾಗೂ ಪೊಲೀಸ್ ಸಿಬ್ಬಂದಿಗಳಾದ ಎಂ ಎಲ್ ಪಟ್ಟೇದ, ರಾಮನಗೌಡ ಬಿರಾದಾರ್, ಬಸವರಾಜ್ ಹಡಗಲಿ, ಸಿದ್ದನಗೌಡ ದೊಡ್ಡಮನಿ, ಎಸ್ ವಾಯ ಬಿಜ್ಜೂರ, ಎಸ್ ಬಿ ಬಗಲಿ,ಪ್ರಭು ಗಣತಿ, ಹಲವರು
ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button