Uncategorizedಮೈಸೂರ್

ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭ ಫೆ. 10 ರಿಂದ 3 ದಿನಗಳ ಕಾಲ ನಡೆಯಲಿದೆ.

ಮೈಸೂರು: ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ 144 ವರ್ಷಗಳ ಬಳಿಕ ಪವಿತ್ರ ಕುಂಭಮೇಳ (Kumbh Mela) ನಡೆಯುತ್ತಿದೆ.

ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಇದೀಗ ಇತ್ತ ಕರ್ನಾಟಕದಲ್ಲಿ ಕೂಡ ಕುಂಭಮೇಳ ಆರಂಭವಾಗುತ್ತಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ಅಂದರೆ ಫೆ. 10 ರಿಂದ 3 ದಿನಗಳ ಕಾಲ ಕುಂಭಮೇಳ ನಡೆಯಲಿದೆ.

ಮೂರು ವರ್ಷಕ್ಕೊಮ್ಮೆ ಜಿಲ್ಲೆಯ ಟಿ.ನರಸೀಪುರದ ತಿರುಮಕೂಡಲಿನಲ್ಲಿ ಕುಂಭಮೇಳ ನಡೆಯಲಿದ್ದು, ನಾಳೆ ಸಚಿವ ಡಾ ಹೆಚ್. ಸಿ‌ ಮಹದೇವಪ್ಪ ಕುಂಭಮೇಳಕ್ಕೆ ಚಾಲನೆ ನೀಡಲಿದ್ದಾರೆ.

ಆದಿ ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಸೇರಿ ಹಲವರು‌ ಭಾಗಿಯಾಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button