ವಡಗಾಂವ ಯಳ್ಳೂರ ರಸ್ತೆಯ ಗಣೇಶೋತ್ಸವ ಮಂಡಳದಿಂದ ಗಣೇಶನ ಮೂರ್ತಿ ತಯಾರಿಕೆಗೆ ಶುಭಾರಂಭ…

ಬೆಳಗಾವಿ:ನೂರಾರು ಭಕ್ತರು ಭಾಗಿಬೆಳಗಾವಿಯ ವಡಗಾಂವ ಯಳ್ಳೂರ ರಸ್ತೆಯ ಸಾರ್ವಜನಿಕ ಶ್ರೀ ಅಷ್ಟವಿನಾಯಕ ಗಣಪತಿ ಉತ್ಸವ ಮಂಡಳದ ವತಿಯಿಂದ 2025ನೇ ಸಾಲಿನ ಗಣೇಶ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಪೂಜೆ ಸಲ್ಲಿಸಿ ಶುಭಾರಂಭಗೊಳಿಸಲಾಯಿತು.
ಬೆಳಗಾವಿಯ ವಡಗಾಂವ ಯಳ್ಳೂರ ರಸ್ತೆಯ ಸಾರ್ವಜನಿಕ ಶ್ರೀ ಅಷ್ಟವಿನಾಯಕ ಗಣಪತಿ ಉತ್ಸವ ಮಂಡಳದ ವತಿಯಿಂದ 2025ನೇ ಸಾಲಿನ ಗಣೇಶ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಪೂಜೆ ಸಲ್ಲಿಸಿ ಶುಭಾರಂಭಗೊಳಿಸಲಾಯಿತು. ಮೊದಲಿಗೆ ಮಂದಿರದಲ್ಲಿರುವ ಶ್ರೀ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಆರತಿ ನೆರವೇರಿಸಲಾಯಿತು. ಪ್ರಮುಖ ಅತಿಥಿಗಳಾಗಿ ಅನಂತ ದೇಸೂರಕರ, ಪ್ರದೀಪ ದಳವಳಕರ, ಮಂಡಳದ ಅಧ್ಯಕ್ಷರಾದ ಬಾಳು ಗೋರಲ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
ಮೂರ್ತಿಕಾರರಾದ ಮನೋಹರ ಪಾಟೀಲ ಅವರು ಕಳೆದ ಬಾರಿಯೂ ಬೆಳಗಾವಿಯ ಅಷ್ಟವಿನಾಯಕ ನಗರದಲ್ಲಿ ಅತಿ ಎತ್ತರದ 21 ಅಡಿ ಗಣೇಶ ಮೂರ್ತಿಯನ್ನು ತಯಾರಿಸಲಾಗಿತ್ತು. ಈ ಬಾರಿಯೂ ಕೂಡ ಹೊಸ ಸಂಕಲ್ಪದೊಂದಿಗೆ ಮೂರ್ತಿಯನ್ನು ತಯಾರಿಸಲಾಗುವುದು ಎಂದರು.