Uncategorized
ಕಷ್ಟದಲ್ಲಿದ್ದಾಗ ಶಾಲೆಯ ಫೀಸ್ ಕಟ್ಟಿದ ಗುರುವಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ಶಿಷ್ಯ

ಹಾವೇರಿ: ಶಾಲೆಯ ಶುಲ್ಕ ಕಟ್ಟಿ ತನ್ನ ವಿದ್ಯಾಭ್ಯಾಸಕ್ಕೆ ನೆರವಾದ ಶಿಕ್ಷಕನಿಗೆ ಶಿಷ್ಯನೊಬ್ಬ ಹೊಸ ಕಾರು ಖರೀದಿಸಿ ಉಡುಗೊರೆ ನೀಡಿದ್ದಾನೆ.
ಜಿಲ್ಲೆಯ ಹಾನಗಲ್ ಪಟ್ಟಣದ ಕುಮಾರೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಶಿಷ್ಯ ಗುರುವಿಗೆ ಹೊಸ ಕಾರಿನ ಕೀ ಹಸ್ತಾಂತರಿಸಿದ್ದಾನೆ.
ವಿಜ್ಞಾನ ಶಿಕ್ಷಕರಾದ ಸಿ.ಎಸ್.ವಸ್ತ್ರದ ಅವರು ಇಂಥದ್ದೊಂದು ಅಪರೂಪದ ಉಡುಗೊರೆ ಪಡೆದವರು. ನವೀನ್ ಹೂಲಿಹಳ್ಳಿ ಎಂಬವರು ಕಾರು ಉಡುಗೊರೆ ನೀಡಿದ ಹಳೆ ವಿದ್ಯಾರ್ಥಿ.
ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ನವೀನ್ ಸ್ವಿಫ್ಟ್ ಕಾರಿನ ಕೀಯನ್ನು ತನ್ನ ನೆಚ್ಚಿನ ಗುರುವಿಗೆ ಹಸ್ತಾಂತರಿಸಿದರು.
ಇದೀಗ ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ನವೀನ್, “ನಾನು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಕಾರಣ ನನ್ನ ಗುರುಗಳು” ಎಂದು ಸ್ಮರಿಸಿದರು.



