ಹಾಸನ
ಭತ್ತದ ಬೆಳೆಗಳನ್ನ ನಾಶಪಡಿಸಿದ ಕಾಡಾನೆಗಳ ಹಿಂಡು; ಕಂಗಾಲಾದ ರೈತರು

ಹಾಸನ (ಬೇಲೂರು): ಕಟಾವಿಗೆ ಬಂದಿರುವ ಭತ್ತದ ಬೆಳೆಗಳನ್ನ ಕಾಡಾನೆಗಳ ಹಿಂಡು ತುಳಿದು ನಾಶಪಡಿಸಿರುವ ಘಟನೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಮಲಸಾವರ ಹಾಗೂ ಅನುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ರಾತ್ರಿ ನಡೆದಿದೆ.
22 ಕಾಡಾನೆಗಳು ಚಿಕ್ಕ ಸಾಲಾವರ (ಬಾವಿಕಟ್ಟೆ) ಗ್ರಾಮದ ಹರೀಶ್, ಶಾಂತಪ್ಪ, ಅಶೋಕ, ಉಪೇಂದ್ರ ಅವರಿಗೆ ಸೇರಿದ ಭತ್ತದ ಪೈರನ್ನು ನಾಶಪಡಿಸಿ ಮಂಜುನಾಥ್ ಎಂಬುವರಿಗೆ ಸೇರಿದ ತೆಂಗಿನ ಮರಗಳನ್ನು ಮುರಿದಿವೆ. ಬಾವಿಕಟ್ಟೆ ಗ್ರಾಮದ ಸುಶೀಲಮ್ಮ ಎಂಬ ರೈತ ಮಹಿಳೆ ಕಟಾವು ಮಾಡಿ ಒಕ್ಕುವ ಸಲುವಾಗಿ ರಾಶಿ ಹಾಕಿದ್ದ ಭತ್ತವನ್ನು ತುಳಿದು ಹಾಳುಮಾಡಿವೆ.