
ಧಾರವಾಡದಲ್ಲಿ ಜನಿವಾರ ತಗೆಸಿದ ಪ್ರಕರಣ. ಸರ್ಕಾರಿ ನೌಕರರು ಇದ್ದರೆ ಚೆಕ್ ಮಾಡ್ತೇವೆ. ಖಾಸಗಿ ಸಂಸ್ಥೆ ಇದ್ರೆ ಅವರ ಮನಸ್ಥಿತಿ ಸರಿಯಿರಲ್ಲಾ. ಸಂಸ್ಥೆ ಗೆ ಮೊದಲು ನೋಟಿಸ್ ನೀಡಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ನಗರದಲ್ಲಿಂದು ಧಾರವಾಡದಲ್ಲಿ ಜನಿವಾರ ತಗೆಸಿದ ಪ್ರಕರಣ ಸಂಬಂಧಿಸಿದಂತೆ ಮಾತನಾಡಿದ ಅವರು. ಖಾಸಗಿ ಸಂಸ್ಥೆಯಲ್ಲಿ ಮಾಡಿದ್ರೆ ಏನು ಮಾಡೋಕೆ ಆಗುತ್ತೆ. ಮೊದಲು ಸಂಸ್ಥೆ ನಡೆಸೋರಿಗೆ ನೋಟಿಸ್ ನೀಡಬೇಕು. ಅದಕ್ಕೆ ಲಿಖಿತ ರೂಪದಲ್ಲಿ ದೂರು ನೀಡಿದ್ರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ರಾಹುಲ್ ಗಾಂಧಿ ಮಾತು ಕೇಳಿದ್ರೆ ಸಿದ್ದರಾಮಯ್ಯ ನೆಗದು ಬಿದ್ದು ಹೋಗ್ತಾರೆ ಅನ್ನೋ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರ
ಆ ರೀತಿ ಮಾತನಾಡೋದು ಅದು ಅವರ ಬಾಯಿಗೆ ಸರಿ ಅನಸುತ್ತೆ. ಈ ದೇಶ ನೆಗದು ಬಿದ್ದು ಹೋಗಿದೆಯಲ್ಲಾ ಅದಕ್ಕೇನು ಹೇಳ್ತಾರೆ ಎಂದರು. ಅವರ ಆಶಿರ್ವಾದಿಂದ ಎರಡು ಬಾರಿ ಸಿಎಂ ಆಗಿದ್ದಾರೆ. ರಾಹುಲ್ ಗಾಂಧಿ ಬಸ್ಮಾಸುರವಾದ್ರೆ ಮೋದಿ ಅವರು ಏನಂತೆ? ಹನ್ನೊಂದು ವರ್ಷ ಅಧಿಕಾರದಲ್ಲಿದ್ದಾರಲ್ಲಾ ಏನು ಮಾಡಿದ್ದಾರೆ.
ಅವರಿಗೆ ಅನಕೂಲವಾಗೋ ವಿಷಯಗಳ ಬಗ್ಗೆ ಮಾತ್ರ ಬಿಜೆಪಿ ನಾಯಕರು ಮಾತಾಡ್ತಾರೆ. ಬಿಜೆಪಿ ಇರೋ ರಾಜ್ಯದಲ್ಲಿ ದಲಿತರ ಮೇಲೆ ಅಟ್ರಾಸಿಟಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜೋತಿ ಬಾ ಪುಲೆ ಚಿತ್ರ ಬಿಡುಗಡೆ ಗೆ ಯಾಕೆ ವಿರೋಧ ಮಾಡ್ತಿದ್ದಾರೆ? ಭಾರತ ಕೇವಲ ಬಾಂಗ್ಲಾ ಪಾಕಿಸ್ತಾನ ಕ್ಕೆ ಹೋಲಿಕೆ ಮಾಡಿಕೊಂಡು ಇದ್ರೆ ಸಾಲದು ಎಂದರು.