
ಗೋಕಾಕ :ಪೆಹಲ್ಗಾಂ ಘಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವಕನನ್ನು ಥಳಿಸಿದ್ದರಿಂದ ಪಿಎಸ್ಐ ವಿರುದ್ಧ ಯುವಕ ಎಸ್ ಪಿ ಗೆ ದೂರು ನೀಡಿದ್ದಾನೆ
ಪಹಲ್ಗಾಂನಲ್ಲಿ ಗುಂಡಿನ ದಾಳಿಯ ನಂತರ ಸ್ಥಳೀಯ ಮುಸ್ಲಿಮರು ಹತ್ಯೆಯಾದವರ ಕುಟುಂಬ ಸದಸ್ಯರಿಗೆ ಸಹಾಯ ಸಹಕಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋಕಾಕ್ ನಿವಾಸಿ ಶಾನುಲ್ ಸೌದಾಗರ ಎಂಬ ಯುವಕ ರಾಮನನ್ನು ರಕ್ಷಿಸಿದ ರಹೀಮ, ರಾಜಕೀಯ ಕ್ಕಾಗಿ ಹಿಂದೂ ಮುಸ್ಲಿಮರ ನಡುವೆ ದ್ವೇಷ ತರುವವರಿಗೆ ಅರ್ಪಣೆಯೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಈ ಹಿನ್ನಲೆಯಲ್ಲಿ ಗೋಕಾಕ್ ನಗರ ಪಿಎಸ್ಐ ವಾಲಿಕಾರ್ ಯುವಕನನ್ನು ಠಾಣೆಗೆ ಕರೆ ತಂದು ಥಳಿಸಿದ್ದರು. ಈ ಕುರಿತು ಯುವಕ ಶಾನುಲ್ಎಫ್ಐಆರ್ ದಾಖಲಿಸದೆ, ನೋಟಿಸ್ ನೀಡದೆ ನನ್ನನ್ನು ಎರಡು ದಿನ ಠಾಣೆಯಲ್ಲಿ ಇಟ್ಟುಕೊಂಡು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಎಂಎಲ್ಸಿ ದಾಖಲ್ ಮಾಡಿದರೆ ರೌಡಿಶೀಟರ್ ಓಪನ್ ಮಾಡುವ ಬೆದರಿಕೆ ಹಾಕಿದ್ದಾರೆ. ಹಾಗೂ ನನ್ನ ಕುಟುಂಬ ಸದಸ್ಯರು ಭೇಟಿಯಾಗಲು ಬಂದರೆ ಅವಕಾಶವನ್ನು ನೀಡಿಲ್ಲ. ನನಗೆ ನ್ಯಾಯ ಕೊಡಿಸಬೇಕೆಂದು ಪಿಎಸ್ಐ ವಿರುದ್ಧ ಎಸ್ಪಿಗೆ ದೂರು ನೀಡಿರುವುದಾಗಿ ಶಾನುಲ್ ತಿಳಿಸಿದ್ದಾರೆ