ಬೈಲ್ ಹೊಂಗಲ್
ನಿವೃತ್ತ ಶಿಕ್ಷಕ ನೇಣಿಗೆ ಶರಣು.

ಬೈಲಹೊಂಗಲ :ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರು ಮಾನಸಿಕ ನೊಂದು ಮರಕ್ಕೆ ನೇಣು ಹಾಕಿಕೊಂಡು . ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ಬೆಳಗಾವಿ ರಸ್ತೆಯ ಬೈಲವಾಡ ಹದ್ದಿಯ ಜಮೀನಿನಲ್ಲಿ ನಡೆದಿದೆ.
ನಾಗನೂರ ಗ್ರಾಮದ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ, ಹಾಲಿ ಉಳವಿ ಚನ್ನಬಸವೇಶ್ವರ ನಗರದ ನಿವಾಸಿ ಬಸವರಾಜ ಕರಬಸಪ್ಪ ತಲ್ಲೂರ (66) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ.
ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.