
ಹುಬ್ಬಳ್ಳಿ : ಎಲ್ಲರೂ ಸಂತೋಷದಿಂದ ಸಾಗರಕ್ಕೆ ನಿಶ್ಚಿತಾರ್ಥಕ್ಕೆಂದು ಹೋಗಿದ್ದರು. ಕುಟುಂಬಸ್ಥರು ಮನೆಯ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುವಾಗ, ಲಾರಿ ಮತ್ತು ಕಾರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಸಾಗರದ ಇಡೀ ಕುಟುಂಬವೇ ಮಸನ ಸೇರಿದ್ದಾರೆ.
ಇಂದು ಬೆಳಗ್ಗೆ ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತವಾಗಿದೆ. ಈ ಆ್ಯಕ್ಸಿಡೆಂಟ್‌ದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಶೆಟ್ಟಿ ಕುಟುಂಬದ ಐದು ಜನರು ಸಾವನ್ನಪ್ಪಿದ್ದಾರೆ. ಬಾಗಲಕೋಟ ಜಿಲ್ಲೆಯ ಕುಳಗೇರಿ ಕ್ರಾಸ್ ಬಳಿ ಈ ಶೆಟ್ಟಿ ಕುಟುಂಬ ಹೊಟೇಲ್ ಇಟ್ಟುಕೊಂಡು ಇಲ್ಲಿಯೇ ವಾಸವಾಗಿದ್ದರು. ಆದ್ರೆ ಸಾಗರದಿಂದ ನಿಶ್ಚಿತಾರ್ಥ ಮುಗಿಸಿಕೊಂಡು ಬರುವಾಗ ಹುಬ್ಬಳ್ಳಿ ಟು ವಿಜಯಪುರ ಹೆದ್ದಾರಿಯಲ್ಲಿ ಲಾರಿ ಮತ್ತು ಇವರ ಕಾರ್ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ವಿಠಲ
ಶೆಟ್ಟಿ,ಶಶಿಕಲಾ ಶೆಟ್ಟಿ, ಸಂದೀಪ್ ಶೆಟ್ಟಿ, ಶ್ವೇತಾ ಶೆಟ್ಟಿ, ಅಂಜಲಿ ಶೆಟ್ಟಿ ಇವರು ಮರಣ ಹೊಂದಿದ ದುರ್ದೈವಿಗಳು.
ಶ್ವೇತಾ ಅನ್ನೋ ಯುವತಿಯ ಸಾಗರದಲ್ಲಿ ಎಂಗೇಜಮೆಂಟ್ ಇತ್ತು. ಎಂಗೇಜಮೆಂಟ್ ಮುಗಿಸಿಕೊಂಡು ಮರಳಿ ಕುಳಗೇರಿಗೆ ಬರುವಾಗ ಈ ದುರ್ಘಟನೆ ನಡೆದಿದೆ. ಇನ್ನು ಅಂಜಲಿ, ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದಳು. ಆದ್ರೆ ದುರ್ದೈವ ಎಲ್ಲರೂ ಮಸಣ ಸೇರಿದ್ದಾರೆ. ಈ ಬಗ್ಗೆ ಧಾರವಾಡ ಗ್ರಾಮೀಣ ಎಸ್.ಪಿ ಗೋಪಾಲ ಬ್ಯಾಕೋಡ್ ಮಾಹಿತಿ ನೀಡಿದ್ದಾರೆ ಕೇಳಿ.
ಇನ್ನು ಅಪಘಾತ ಮಾಡಿದ ಲಾರಿ ಲಾರಿ ಸಂಘದ ಮಾಜಿ ಅಧ್ಯಕ್ಷ ಗೈಬುಸಾಬ ಹೊನ್ಯಾಳ ಅವರಿಗೆ ಸೇರಿದ್ದು ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ. ಮೃತರ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಾಗರದಲ್ಲಿರುವ ಅವರ ಕುಟುಂಬಕ್ಕೆ ಗ್ರಾಮೀಣ ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್.ಪಿ ಗೋಪಾಲ ಬ್ಯಾಕೋಡ್, ಇನ್ಸೆಕ್ಟರ್ ಮುರಗೇಶ ಚಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.