ವಿಜಯಪುರ

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳು ಪೊಲೀಸರ ವಶಕ್ಕೆ.

ವಿಜಯಪುರ:  ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ (44), ಮಹಾಲಿಂಗಪೂರದ ಕಿರಣ ಉರ್ಫ್ ಭೀಮಪ್ಪ ರಾಮಪ್ಪ ಹರಿಜನ (25), ಕೊಲ್ಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ (44) ಹಾಗೂ ವಿಜಯಪುರ ವಜ್ರ ಹನುಮಾನ ನಗರದ ರಿಯಾಜ್ ಕಾಶಿಮಸಾಬ ವಾಲಿಕಾರ (44) ಬಂಧಿತ ಆರೋಪಿಗಳು.

ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಆಗಿರುವ ರಿಯಾಜ್ ವಾಲಿಕಾರ ಈತ, ನಗರದ ವಾಟರ್ ಟ್ಯಾಂಕ್ ಬಳಿಯ ಹಾಲಿನ ಅಂಗಡಿಯಲ್ಲಿ 500 ರೂ. ಮುಖಬೆಲೆ ಖೋಟಾ ನೋಟು ನೀಡುತ್ತಿರುವ ಮಾಹಿತಿ ಆಧರಿಸಿ, ಪೊಲೀಸರು ಈ ಆರೋಪಿಯನ್ನು ವಶಕ್ಕೆ ಪಡೆದ ವೇಳೆ ಈ ಪ್ರಕರಣ ಬೆಳೆಕಿಗೆ ಬಂದಿದ್ದು, ಆರೋಪಿಗಳಿಂದ 500 ರೂ. ಮುಖಬೆಲೆಯ ಒಟ್ಟು 1,22,500 ಮೊತ್ತದ 245 ಖೋಟಾ ನೋಟುಗಳನ್ನು ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಿದ್ದಾರೆ.

ಗಾಂಧಿಚೌಕ್ ಪೊಲೀಸ್ ಠಾಣೆ ಸಿಪಿಐ ಪ್ರದೀಪ ತಳಕೇರಿ, ಪಿಎಸ್‌ಐಗಳಾದ ರಾಜು ಮಮದಾಪುರ, ಸುಷ್ಮಾ ನಂದಿಗೋಣ, ಸಿಬ್ಬಂದಿಗಳಾದ ಅನೀಲ ದೊಡಮನಿ, ರಾಜು ನಾಯಕ, ಎಸ್.ಪಿ. ಗದ್ಯಾಳ, ಜಿ.ಎಚ್‌. ಮುಲ್ಲಾ, ಕೆ.ಜೆ. ರಾಠೋಡ, ವಿ.ಎಚ್‌. ಕಡ್ಲಿಬಾಳು, ಆ‌ರ್.ಎಸ್. ಗೋದೆ, ಬಸವರಾಜ ದಿನ್ನಿ, ಎಚ್‌.ಎಚ್. ಜಮಾದಾರ ತಂಡ ಆರೋಪಿಗಳನ್ನು ಬಂಧಿಸಿದೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button