ಜಾತಿಜನಗಣತಿ ವರದಿ ಜಾರಿಗೊಳಿಸಿ ವಂಚಿತ ಸಮಾಜಕ್ಕೆ ನಾಯ್ಯ ದೊರಕಿಸಲು ಸರ್ಕಾರ ಬದ್ಧ; ಗೃಹ ಸಚಿವ ಜಿ.ಪರಮೇಶ್ವ

ದಾವಣಗೆರೆ: ಸೌಲಭ್ಯಗಳಿಂದ ವಂಚಿತ ಸಮಾಜಗಳಿಗೆ ನ್ಯಾಯ ದೊರಕಿಸುವ ಉದ್ಧೇಶದಿಂದ ಸುಮಾರು 160 ಕೋಟಿ ವೆಚ್ಚದಲ್ಲಿ ಮಾಡಲಾದ ಜಾತಿಗಣತಿಯ ವರದಿಯನ್ನು ಸರ್ಕಾರ ಜಾರಿ ಮಾಡಲು ಬದ್ಧವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ನುಡಿದರು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ರಾಜ್ಯಮಟ್ಟದ 7ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ನಡೆಯಿತು. ಈ ವೇಳೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ ಅವರು ಜಾತಿ ಜನಗಣತಿ ವಿಚಾರ ಮುನ್ನೆಲೆಗೆ ಬಂದಿದ್ದು, ಇದಕ್ಕೆ ಹಲವರು ರಾಜಕೀಯ ವಿಚಾರ ಎನ್ನುತ್ತಿದ್ದಾರೆ.
ಸಿಎಂ ಸಿದ್ಧರಾಮಯ್ಯನವರು ಸುಮಾರು 160 ಕೋಟಿ ರೂಪಾಯಿ ವೆಚ್ಚ ಮಾಡಿ ಜಾತಿಗಣತಿ ಮಾಡಿದ್ದಾರೆ. ಆ ವೇಳೆ ಯಾರೂ ವಿರೋಧ ಮಾಡಲಿಲ್ಲ. ಈಗ ವರದಿ ಬಂದ ಮೇಲೆ ಅದನ್ನು ಜಾರಿಗೊಳಿಸಲು ತಡೆಯುವಂತಹ ಶಕ್ತಿಗಳು ಸರ್ಕಾರಕ್ಕೆ ಸವಾಲಾಗಿ ನಿಂತುಕೊಂಡಿವೆ. ಆದರೇ ಸಿಎಂ ಸಿದ್ಧರಾಮಯ್ಯ ಇದನ್ನ ಜಾರಿಗೊಳಿಸಲಿದ್ದು, ಅದರ ಆಧಾರದ ಮೇಲೆ ಸೌಲಭ್ಯ ವಂಚಿತರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು. ಇದಕ್ಕಾಗಿ ಜಾತಿ ಗಣತಿ ಅವಶ್ಯಕವಾಗಿದೆ ಎಂದರು.