ವಿಜಯದಶಮಿಗೆ ಗಗನಕ್ಕೇರಿದ ಹೂವಿನ ದರ : ಬೆಲೆ ಕೇಳಿ ಗ್ರಾಹಕರು ಶಾಕ್

ವಿಜಯದಶಮಿಗೆ ಗಗನಕ್ಕೇರಿದ ಹೂವಿನ ದರ : ಬೆಲೆ ಕೇಳಿ ಗ್ರಾಹಕರು ಶಾಕ್
ವಿಜಯದಶಮಿಗೆ ಕೌಂಟ್ ಡೌನ್ ಆರಂಭವಾಗಿದ್ದು ಹಬ್ಬಕ್ಕೆ ಹೂವಿನ ಬೆಲೆ ದುಬಾರಿಯಾಗಿದೆ. ಹೂವಿನ ಬೆಲೆ ಕೇಳಿ ಗ್ರಾಹಕರು ಶಾಕ್ ಆಗುತ್ತಿದ್ದಾರೆ. ಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ್ಲೇ ಹೂವಿನ ಬೆಲೆ ಗಗನಕ್ಕೆ ಏರಿದೆ.
ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಸುರಿಯುತ್ತೀರುವ ಧಾರಾಕಾರ ಮಳೆಯಿಂದ ಬೆಳಗಾವಿಯ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ದರ ಗಗನಕ್ಕೇರಿದೆ ,ಸಣ್ಣಪುಟ ಹೂವಿನ ವ್ಯಾಪಾರಿಗಳು ಹಾಗೂ ಗ್ರಾಹಕರು ಹೂವಿನ ದರ ಕೇಳಿ ಶಾಕ್ ಆಗುತ್ತೀದ್ದಾರೆ ,
ಮಲ್ಲಿಗೆ ಹೂವು ಕೆಜಿಗೆ ಒಂದು ಸಾವಿರ ದಿಂದ 800 ,ರೂಪಾಯಿ ವರಗೆ ಇದೆ ಸುಗಂಧರಾಜ ಕೆಜಿಗೆ 600 ರೂಪಾಯಿ , ಚೆಂಡೂ ಹೂವು 150 ರಿಂದ 200 ವರಗೆ ಇದೆ .
ಹೂವಿನ ವ್ಯಾಪಾರಿ ವಿಶಾಲ ಪಾಟೀಲ ಮಾತನಾಡಿ ಬೆಳಗಾವಿ ಹೂವಿನ ಮಾರುಕಟ್ಟೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಮಾರುಕಟ್ಟೆಯಾಗಿದೆ , ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹೂವು ನಾಶವಾಗಿ ದರ ಏರಿಕೆಗೆ ಕಾರಣವಾಗಿದೆ ,. ಮಲ್ಲಿಗೆ ಕೆಜಿಗೆ 800 ರಿಂದ 900 ರೂಪಾಯಿ. ಗುಲಾಬಿ ಕೆಜಿಗೆ 500 ರೂಪಾಯಿ ಯಿಂದ 400 ರೂಪಾಯಿ. ಸೇವಂತಿಗೆ ಕೆಜಿಗೆ 450 ರೂಪಾಯಿ ಇದೆ ಎಂದು ಹೇಳಿದ್ದರು .