ಅಮಾನತಗೊಂಡಿದ್ದ ಅಡುಗೆ ಸಿಬ್ಬಂದಿ ಮರು ನೇಮಕ! ಕೊನೆಗೆ ಎಚ್ಚೆತ್ತುಕೊಂಡ ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು!

ಅಮಾನತಗೊಂಡಿದ್ದ ಅಡುಗೆ ಸಿಬ್ಬಂದಿ ಮರು ನೇಮಕ!
ಕೊನೆಗೆ ಎಚ್ಚೆತ್ತುಕೊಂಡ ಹಿದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು!
ಬೆಳಗಾವಿ ಹಿ0ದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಥೆ” ಎಂದು ಸುದ್ದಿ ವಾಹಿನಿಯಲ್ಲಿ ಪ್ರಕಟವಾದ ಸುದ್ದಿ ಎಚ್ಚೆತ್ತುಕೊಂಡ ಹಿದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೊನೆಗೂ ಅಮಾಯಕ 3 ಅಡುಗೆ ಸಿಬ್ಬಂದಿಗಳ ಅಮಾನತ್ತು ಆದೇಶವನ್ನು ಹಿಂಪಡೆದಿದ್ದಾರೆ.
ಕಳೆದ ದಿ; 27-10-20204 ರಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ವಿದ್ಯಾರ್ಥಿ ಕುಮಾರ ರಜಿತ್ ಶ್ರೀಕಾಂತ ಕಲ್ಲೋಳಿ ಈತನು ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟ ಪ್ರಕರಣದಲ್ಲಿ ಮೇಲಾಧಿಕಾರಿಗಳು ನಿರ್ಲಕ್ಷ್ಯ ತೋರಿದ್ದ ನಿಲಯ ಪಾಲಕರಾದ ಎಸ್ ಎಸ್ ಕೋಟಗಿ ಅವರ ಮೇಲೆ ಕ್ರಮ ಜರುಗಿಸದೇ ಅಮಾಯಕ ಅಡುಗೆ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು.
ಈ ಅನ್ಯಾಯದ ವಿರುದ್ಧ ನಿರಂತರ ಧ್ವನಿ ಎತ್ತಿದ ನಮ್ಮ ಸುವರ್ಣ ಜನನಿ ಹಃಗೂ ಎಸ್ ಕೆ ಸುದ್ದಿ ವಾಹಿನಿ, ಅಮಾಯಕ ಅಡುಗೆಯವರ ಅಮಾನತು ಖಂಡಿಸಿ ನಿರಂತರ ಸುದ್ದಿ ಪ್ರಕಟಿಸಿದ್ದಲ್ಲದೆಯೇ,ನಿರಂತರ ಇಲಾಖೆ ಆಯುಕ್ತರು ಸೇರಿದಂತೆ ಉನ್ನತ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸ ಅವರ ಗಮನ ಸೆಳೆಯಲಾಗಿತ್ತು.
ಕೊನೆಗೂ ಅಡುಗೆ ಸಿಬ್ಬಂದಿ ಅಮಾನತು ತೆರವುಗೋಳಿಸಿದ್ದರಿಂದ ನಮ್ಮ ಹೋರಾಟಕ್ಕೆ ಜಯ ಸಂದಿದ್ದು, ಈ ವಿದ್ಯಾರ್ಥಿ ಸಾವಿನ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾದ ನಿಲಯ ಪಾಲಕ ಎಸ್. ಎಸ್. ಕೋಟಗಿ ಅವರ ಮೇಲೆ ಮೇಲಾಧಿಕಾರಿಗಳು ಯಾವ ಕ್ರಮ ಜರುಗಿಸುತ್ತಾರೋ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.