
ವನ್ಯಜೀವಿ ಸಂರಕ್ಷಣೆಗಾಗಿ ಜನಜಾಗ್ರತಿ ಹೆಚ್ಚೆಚ್ಚು ಮೂಡಲಿ
ವನ್ಯಜೀವಿ ಸಂರಕ್ಷಣೆಗಾಗಿ ಜನಜಾಗ್ರತಿ ಹೆಚ್ಚೆಚ್ಚು ಮೂಡಲಿ.
ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ, ವಿನಯ ನಾವಲಗಟ್ಟಿ ಅಭಿಮತ.
ಬೆಳಗಾವಿ. ೦೬- ವನ್ಯಜೀವಿಯೇ ಅರಣ್ಯದ ನಿಜವಾದ ಸಂಪತ್ತು. ವನ್ಯಜೀವಿ ಇದ್ದರೆ ಅರಣ್ಯ. ಅರಣ್ಯ ಇದ್ದರೆ ನಮ್ಮ ಉಸಿರು. ವನ್ಯಜೀವಿ ಬದುಕಿಗೆ ಬೆಳಕು ಚೆಲ್ಲುವ ಕಾರ್ಯಗಳು ನಿರಂತರವಾಗಿರಬೇಕಲ್ಲದೆ, ಹೆಚ್ಚೆಚ್ಚು ಮೂಡಿ ಬರಬೇಕು ಎಂದು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಹೇಳಿದರು. ಅವರು ಗುರುವಾರ ಸಂಜೆ ರಾಮತೀರ್ಥನಗರ ದ ಸ್ನೇಹ ಸಮಾಜ ಸೇವಾ ಸಂಘದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ದ ಗ್ರಂಥಾಲಯದಲ್ಲಿ ಬೆಳಗಾವಿ ವನ್ಯಜೀವಿ ಪರಿಸರ ವೇದಿಕೆ ವತಿಯಿಂದ ಜರುಗಿದ ವನ್ಯಜೀವಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಾಣಿ ಮತ್ತು ಪರಿಸರ ಪ್ರೀಯರನ್ನುದ್ದೇಶಿಸಿ ಮಾತನಾಡಿದರು. ವನ್ಯಜೀವಿ ಸ್ವೇಚ್ಛೆಯಿಂದ ಬದುಕಬೇಕು. ಅವುಗಳ ರಕ್ಷಣೆ ಪ್ರತಿಯೊಬ್ಬ ನಾಗರೀಕನದ್ದು. ಮೋಜಿಗಾಗಿ ಪ್ರಾಣಿ ಹಿಂಸೆ ಸರಿಯಲ್ಲ. ಪ್ರಾಣಿ ಹಿಂಸೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವದಾಗಬೇಕು. ಹತ್ತಾರು ಕಾರ್ಯಕ್ರಮಗಳನ್ನು ಸಂಘಟಿಸಿ ವನ್ಯ ಪ್ರಾಣಿ ಪ್ರಪಂಚದ ಕುರಿತು ಜನ ಜಾಗ್ರತಿ ಮಾಡಿ, ಪ್ರತಿಯೊಬ್ಬರನ್ನೂ ವನ್ಯ ಪ್ರಾಣಿ ಪ್ರಿಯರನ್ನಾಗಿಸುವ ಸ್ನೇಹ ಸಮಾಜ ಸೇವಾ ಸಂಘದ ಕಾರ್ಯ ನಿಜಕ್ಕೂ ಶ್ಲ್ಯಾಘನೀಯ ವಾಗಿದೆ . ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಹತ್ತಿರದ ಗ್ರಂಥಾಲಯ ಪಕ್ಕದಲ್ಲಿ ಅಧ್ಯಯನ ಭವನ ಶೀಘ್ರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ವನ್ಯಜೀವಿ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಅರ್ಥಪೂರ್ಣ ವೆನಿಸಲು ಎಲ್ಲ ಸಮಾಜ ಬಾಂಧವರೂ ಒಗ್ಗೂಡಿ ಪಾಲ್ಗೊಳ್ಳುವದಾಗಬೇಕೆಂದರಲ್ಲದೆ, ಜಾನಪದ ವಿಶ್ವ ವಿದ್ಯಾಲಯದಿಂದ ಪಿ ಎಚ್ ಡಿ ಪಡೆದ ಪೊಲೀಸ್ ಇನ್ಸಪೆಕ್ಟರ್ ಡಾ ಜೋತಿರ್ಲಿಂಗ ಹೊಣಕಟ್ಟಿ ಅವರನ್ನು ಸಂಘದ ಪರ ಸನ್ಮಾನಿಸಿ ಗೌರವಿಸಿದರು. ಸನ್ಮಾನಕ್ಕುತ್ತರವಾಗಿ ಮಾತನಾಡಿದ ಹೊನಕಟ್ಟಿ ಜಾನಪದದಲ್ಲಿರುವ ಕಸುವು ಇನ್ನೆಲ್ಲೂ ಸಿಗದು. ಅಜ್ಜ,ಮುತ್ತಜ್ಜರಲ್ಲಿರುವ ಹಳೆಯ ಜಾನಪದ ಸಾಹಿತ್ಯ ಸಂಗ್ರಹ ನಮ್ಮದಾಗಬೇಕು. ಫ ಗು ಹಳಕಟ್ಟಿ ಅವರು ಮಾಡಿದ ಕಾರ್ಯ ಶತ ಶತಮಾನಕ್ಕೂ ಶ್ರೀಮಂತವಾಗಿದ್ದು. ವಚನ ಪಿತಾಮಹ ಎಣಿಸಿದ್ದಾರೆ ಎಂದರಲ್ಲದೆ, ಅದ್ಭುತವಾದ ಎರಡು ಜಾನಪದ ಹಾಡು ಹಾಡಿ ರಂಜಿಸಿದರು. ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ
ಲಿಂಗರಾಜ ಕಾಲೇಜಿನ ನಿವ್ರತ್ತ ಪ್ರಾದ್ಯಾಪಕರಾದ ಪ್ರೊ. ಶಿವಾನಂದ ಮೂಲಿಮನಿ ವನ್ಯಜೀವಿ ಬದುಕು ಶ್ರೀಮಂತಗೊಳ್ಳಬೇಕು. ಅವುಗಳ. ಸಂರಕ್ಷಣೆಗೆ ಸರ್ಕಾರದೊಂದಿಗೆ ಸಮಾಜ ಕೈ ಜೋಡಿಸಬೇಕು. ನಮ್ಮ ಪೂರ್ವಜರೊಂದಿಗಿದ್ದ ದನ,ಕರುಗಳು ಇತ್ತೀಚೆಗೆ ಮಾಯವಾಗುತ್ತಿದ್ದು, ಚಿತ್ರ ಪಟಗಳಲ್ಲಿ ನೋಡುವಂತಾಗಿದ್ದು, ದುರದ್ರಷ್ಟಕರ. ಪ್ರಾಣಿ, ಪಕ್ಷಿಗಳು ಮುಕ್ತವಾಗಿ ಜೀವಿಸಬೇಕು. ವನ್ಯಜೀವಿ ಕುರಿತು ದಿನ ನಿತ್ಯ ಜನ ಜಾಗ್ರತಿಯಾಗಬೇಕು.
ರಾಸಾಯನಿಕಗಳ ಬಳಕೆ ಕಡಿಮೆಯಾಗಬೇಕು. ಸಾವಯವ ಬಳಕೆ ನಮ್ಮದಾಗಬೇಕು. ಜಲ ಮತ್ತು ಭೂಮಿ ವಿಷಮುಕ್ತಕ್ಕೆ ಎಲ್ಲರೂ ಪಣ ತೊಡಬೇಕು ಎಂದರು.
ವನ್ಯಜೀವಿ ಪರಿಸರ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ ಡಿ ಎನ್ ಮಿಸಾಳೆ ವನ್ಯಜೀವಿ ದಿನಾಚರಣೆ ಕುರಿತು ಮೌಲಿಕ ಮಾತನಾಡಿದರು.