ಸಂಗೊಳ್ಳಿ ರಾಯಣ್ಣ ಮತ್ತು ಬಸವೇಶ್ವರ್ ಸೌಹಾರ್ದ ಸೊಸೈಟಿ ಠೇವಣಿ ಮರಳಿಸಲು ಆಗ್ರಹ;ಮಾರ್ಚ್ 3 ರಿಂದ ಹೋರಾಟ ; ನ್ಯಾಯವಾದಿ ಎನ್.ಆರ್. ಲಾತೂರ್

ಬೆಳಗಾವಿ: ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸಹಕಾರಿ ಸೊಸೈಟಿ ಮತ್ತು ಬಸವೇಶ್ವರ ಸೌಹಾರ್ದ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಗ್ರಾಹಕರ ನ್ಯಾಯಾಲಯದ ಆದೇಶದಂತೆ ಮರಳಿಸಬೇಕೆಂದು ಗ್ರಾಹಕರು ನ್ಯಾಯವಾದಿಗಳ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಬೆಳಗಾವಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಇಂದು ಜಮಾಯಿಸಿದ್ದ ಗ್ರಾಹಕರು ಸೊಸೈಟಿಗಳ ಹಾಗೂ ಸಕ್ಷಮ ಪ್ರಾಧಿಕಾರದ ಅಧಿಕಾರಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ನ್ಯಾಯವಾದಿ ಎನ್ ಆರ್ ಲಾತೂರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೌಹಾರ್ದ ಸೊಸೈಟಿ ಹಾಗೂ ಬಸವೇಶ್ವರ ಸೊಸೈಟಿಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಗ್ರಾಹಕರು ಠೇವಣಿ ಇಟ್ಟಿದ್ದರು ಠೇವಣಿ ಅವಧಿ ಮುಗಿದ ನಂತರ ಮರಳಿಸಲು ಕೇಳಿದಾಗ ವಿಳಂಬವಾಗಿತ್ತು ತದನಂತರ ಕಾನೂನು ಕ್ರಮದಿಂದಾಗಿ ಸೊಸೈಟಿ ಮುಚ್ಚಿಹೋಯಿತು ನಂತರ ಠೇವಣಿದಾರು ಗ್ರಾಹಕರ ನ್ಯಾಯಾಲಯಕ್ಕೆ ಹೋದಾಗ ಠೇವಣಿ ಮರಳಿಸಬೇಕು ಎಂಬ ಆದೇಶ ನೀಡಿದ್ದರು. ಆದರೆ 2017ರಲ್ಲಿ ಸೊಸೈಟಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕಾರಿಯನ್ನು ನೇಮಿಸಿ. ಠೇವಣಿ ಇಟ್ಟಿರುವ ಗ್ರಾಹಕರ ದಾಖಲಾತಿ ಅರ್ಜಿಗಳನ್ನು ಪಡೆಯಲಾಯಿತು .ಈಗ ಅದರಲ್ಲಿ 6000 ಗ್ರಾಹಕರ ದಾಖಲಾತಿಗಳು ಸರಿ ಇಲ್ಲವೆಂದು ತಿರಸ್ಕರಿಸಲಾಗಿದೆ ಎಂದರು.
ಇದರಿಂದ ಈಗಾಗಲೇ ಸಾಕಷ್ಟು ನೊಂದಿರುವ ಠೇವಣಿದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದು ಖಂಡನೀಯ. ತಕ್ಷಣವೇ ಸಕ್ಷಮ ಪ್ರಾಧಿಕಾರದ ಅಧಿಕಾರಿಯನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಹಾಗೂ ಗ್ರಾಹಕರಿಗೆ ತೊಂದರೆಯಾಗುವುದರಿಂದ ಬೆಂಗಳೂರಿನಲ್ಲಿರುವ ಸಾಲ ವಸೂಲಾತಿ ನ್ಯಾಯಮಂಡಳಿಯನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕು
ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಹಕರ ನ್ಯಾಯಾಲಯದ ಆದೇಶದಂತೆ ಒಂದು ವಾರದೊಳಗಾಗಿ ಠೇವಣಿ ಮರಳಿಸಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮಾರ್ಚ್ ಮೂರರಿಂದ ಜಿಲ್ಲಾಧಿಕಾರಿಗಳ ಕಚೇರಿದರು ಉಗ್ರ ಹೋರಾಟ ಮಾಡಲಾಗುವುದೆಂದು ನ್ಯಾಯವಾದಿ ಲಾತೂರ್ ಎಚ್ಚರಿಕೆ ನೀಡಿದರು.
ನಂತರ ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು ಠೇವಣಿದಾರರನ್ನು ಬೆಂಬಲಿಸಿ, ಅನೇಕ ನ್ಯಾಯವಾದಿಗಳು ಸಾರ್ವಜನಿಕರು ಹಾಗೂ ಠೇವಣಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
ಗ್ರಾಹಕರು ಆಗ್ರಹಿಸಿದ್ದು ಈ ಕುರಿತು ಠೇವಣಿದಾರರ ಅರ್ಜಿಯನ್ನು ತಿರಸ್ಕರಿಸಿರುವ ಠೇವಣಿದಾರರ