ರಾಜಕೀಯರಾಜ್ಯ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಒತ್ತು ಕೊಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಒತ್ತು ಕೊಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಒತ್ತು ಕೊಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಐದು ದಿನಗಳ ಮಹಾಶಿವರಾತ್ರಿ ಮಹೋತ್ಸವ ನಾಲ್ಕನೇ ದಿನದ ಮಹಾಶಿವರಾತ್ರಿ ಕಾರ್ಯಕ್ರಮದ ನಿಮಿತ್ಯ ಮುಖ್ಯ ಅತಿಥಿಯಾಗಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಭಾಗವಹಿಸಿ ದ್ವಾದಶ ಜ್ಯೋತಿರ್ಲಿಂಗ ಹಾಗೂ 15ಅಡಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಮೂಲಕ ಹಾಗೂ ಗಣ್ಯರೊಂದಿಗೆ ದೀಪ ಪ್ರಜ್ವಲಿಸಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು ಇವತ್ತಿನ ದಿನ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಲು ಕಾಳಜಿ ವಹಿಸಬೇಕು ಇವತ್ತು ಮಕ್ಕಳು ಸೋಶಿಯಲ್ ಮಿಡಿಯಾಗಳಲ್ಲಿ ಬಹಳಷ್ಟು ತೊಡಗಿಕೊಳ್ಳತಾ ತಪ್ಪು ದಾರಿ ಹಿಡಿಯುತಿದ್ದು ಅವರಿಗೆ ಒಳ್ಳೆಯ ಸಂಸ್ಕಾರ ನೀಡಬೇಕು ಇಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮೂಲಕ ಜ್ಞಾನ ಮಾರ್ಗದರ್ಶನ ನೀಡುತಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳುತ್ತಾ ಬೇರೆಯವರಿಗೆ ಕೇಡನ್ನು ಬಯಸದೆ ಇನ್ನೊಬ್ಬರಿಗೆ ಸಹಾಯ ಆಗುವಂತಹ ಗುಣಗಳನ್ನು ಬೆಳೆಸಿಕೊಂಡಲ್ಲಿ ನಮಗೂ ಒಳ್ಳೆಯದಾಗಲಿದೆ ಎಂದರು.
ನಂತರ ಐನಾಪೂರ ಸೇವಾ ಕೇಂದ್ರದ ಸಂಚಾಲಕಿ ರಾಜಯಯೋಗಿನಿ ಬಿಕೆ ಶಶಿಕಲಾ ಅಕ್ಕನವರು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಆಕರ್ಷಣದ ಕೇಂದ್ರ ಬಿಂದು ಬಾಲಶಿವನ ವೇಷದಲ್ಲಿ ಹತ್ತು ತಿಂಗಳ ಪುಟ್ಟ ಮಗು ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ತುಂಬಿ ತುಳುಕಿದ ಜನಸಾಗರ ಸಾವಿರಾರು ಶಿವನ ಭಕ್ತಾದಿಗಳು ಕಾರ್ಯಕ್ರಮಕ್ಕೆ ಬಂದು ಮೆರಗು ನೀಡಿದರು.
ಈ ಸಂದರ್ಭದಲ್ಲಿ ರಾಜಯೋಗಿನಿ ಬಿಕೆ ವಿದ್ಯಾ ಅಕ್ಕನವರು, ರಾಜಯೋಗಿನಿ ಬಿಕೆ ಶಶಿಕಲಾ ಅಕ್ಕನವರು, ಯುವ ಧುರೀಣರಾದ ಅಮಿತ ಘಾಟಗೆ, ಪ್ರಥಮ ದರ್ಜೆ ಗುತ್ತಿಗೆದಾರ ಸದಾಶಿವ ದಳವಾಯಿ, ಸುಕುಮಾರ ಪಾಟೀಲ, ಹೊಸ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ .ಎಸ್. ಟೋನ್ನೆ, ಶಾಂತಾರಾಂ ಸಣ್ಣಕ್ಕಿ, ಡಾ. ಬಾಬಾಜಾನ ಚಮ್ಮನಶೇಕ, ಮಾರುತಿ ಮನಗುತ್ತಿ, ಗಜಾನನ ಜಗದಾಳೆ, ಪರಶುರಾಮ ವಡ್ಡರ, ಮನೋಹರ ಬನಕರ, ರಾಜು ಶಿಂದೆ, ಸಾಗರ ವರಗಂಟೆ, ಸಂಜೀವ ಬ್ಯಾಕುಡೆ, ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button