
ಭೂಮಿಹೀನ ದಲಿತರಿಗೆ ನ್ಯಾಯ ನೀಡಿ…
ಡಿ.ಎಸ್.ಎಸ್. ಅಂಬೇಡ್ಕರ್ ವಾದದಿಂದ ತಹಶೀಲ್ದಾರ ಕಾರ್ಯಾಲಯದೆದುರು ಪ್ರತಿಭಟನೆ
ಭೂಮಿಹೀನ ದಲಿತರಿಗೆ ಭೂಮಿಯನ್ನು ಒದಗಿಸಬೇಕು. ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನಿನಲ್ಲಿ ಅವರ ಹೆಸರು ನೊಂದಾಯಿಸಬೇಕೆಂದು ಇಂದು ಬೆಳಗಾವಿಯ ತಹಶೀಲ್ದಾರರ ಕಾರ್ಯಾಲಯದ ಎದುರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಇಂದು ಬೆಳಗಾವಿಯ ತಹಶೀಲ್ದಾರರ ಕಾರ್ಯಾಲಯದ ಎದುರು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದದ ವತಿಯಿಂದ ಪ್ರತಿಭಟನೆಯನ್ನು ನಡೆಸಿ, ಭೂಮಿಹೀನ ದಲಿತರಿಗೆ ಭೂಮಿ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಸ್ವಾತಂತ್ರ್ಯ ಸಿಕ್ಕಾಗಿನಿಂದ ದಲಿತರು ಭೂಮಿಗಾಗಿ ಅರ್ಜಿ ಸಲ್ಲಿಸಿದರೂ ಅವರಿಗೆ ಭೂಮಿಯನ್ನು ನೀಡಿಲ್ಲ.
ತಹಶೀಲ್ದಾರ ಕಾರ್ಯಾಲಯದಲ್ಲಿ ಭರ್ತಿ ಮಾಡಿದ ಅರ್ಜಿಗಳು ಕೊಳೆಯುತ್ತಿವೆಯೇ ಹೊರತು ಭೂಮಿ ಮಾತ್ರ ಸಿಗುತ್ತಿಲ್ಲ. ಇಷ್ಟು ವರ್ಷಗಳ ಕಾಲ ಮಾಡದ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಲಿ ಎಂಬ ಆಶಯವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾದದ ಜಿಲ್ಲಾಧ್ಯಕ್ಷ ಮಹಾಂತೇಶ್ ತಳವಾರ ಹೇಳಿದರು.
ಕಳೆದ 50 ಕ್ಕೂ ಹೆಚ್ಚು ವರ್ಷಗಳಿಂದ ದಲಿತರು ಸಾಗುವಳಿ ಮಾಡುತ್ತಿದ್ದರೂ, ಇಲ್ಲಿಯ ವರೆಗೂ ಜಮೀನು ಅವರ ಹೆಸರಿಗೆ ಆಗಿಲ್ಲ. ಸಚಿವರು, ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ಗ್ರಾಮದಲ್ಲಿಯೂ ದಲಿತರು ಭೂಮಿ ಮತ್ತು ಮನೆರಹಿತವಾಗಿದ್ದಾರೆ. ಅವರಿಗೆ ಸರ್ಕಾರ ನ್ಯಾಯ ನೀಡಲಿ ಎಂದು ಅಶೋಕ ಧನಾಜೀ ಕಾಂಬಳೆ ಆಗ್ರಹಿಸಿದರು.
ಈ ಕುರಿತಾದ ಮನವಿಯನ್ನು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿದ್ದಪ್ಪ ಕಾಂಬಳೆ ಸೇರಿದಂತೆ ಬಿಜಗರ್ಣಿ, ತುರಮುರಿ ಗ್ರಾಮದ ದಲಿತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ
ಭಾಗಿಯಾಗಿದ್ಧರು.
