Uncategorized
ಬೈಲಹೊಂಗಲ: ಪಟ್ಟಣದ ನಂದ್ದೇಮ್ಮದೇವಿ ಜಾತ್ರಾ ಮಹೋತ್ಸವ

ಬೈಲಹೊಂಗಲ: ಪಟ್ಟಣದ ನಂದ್ದೇಮ್ಮದೇವಿ ನಗರದಲ್ಲಿರುವ ಶ್ರೀ ಲೋಕರೆಮ್ಮ ದೇವಿಯ ಜಾತ್ರಾ ಮಹೋತ್ಸವವು ಶನಿವಾರ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಮುಂಜಾನೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ದೇವಿಯನ್ನು ಬಣ್ಣಬಣ್ಣದ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದ್ದು, ದೇವಿಯ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿದರು.
ಬೆಂಕಿ ಕಿಚ್ಚು ಹಾಯುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಕ್ತರು ಜಯಘೋಷಗಳನ್ನು ಮೊಳಗಿಸಿ ಭಕ್ತಿಭಾವದಿಂದ ಪಾಲ್ಗೊಂಡರು. ಕೆಲ ಭಕ್ತರು ಹರಕೆ ತೀರಿಸುವ ಉದ್ದೇಶದಿಂದ ಬೆಂಕಿ ಕಿಚ್ಚು ಹಾಯ್ದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಉರುಳು ಸೇವೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥಗಳ ನೆರವೇರಿಕೆಗೆ ಪ್ರಾರ್ಥಿಸಿದರು.
ಜಾತ್ರೆಗೆ ನಗರದ ವಿವಿಧ ಬಡಾವಣೆಗಳ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.
ಕುಸಲಪ್ಪ ಬಂಡಿವಡ್ಡರ, ಮಾರುತಿ ಬಂಡಿವಡ್ಡರ, ವಿನಾಯಕ ಒಡೆಯರ, ಮಾನಿಂಗ ಬಂಡಿವಡ್ಡರ, ರುದ್ರಪ್ಪ ತುರಮರಿ, ಬಸವರಾಜ ಹೊಸಮನಿ, ಬಾಳು ಬಂಡಿವಡ್ಡರ, ಅಭಿ ಬಂಡಿವಡ್ಡರ ಸೇರಿದಂತೆ ಸಮಾಜದ ಮುಖಂಡರು ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.



