Uncategorized
ಎಂ.ಬಿ ಪಾಟೀಲರಿಗೆ ಜಲಸಂಪನ್ಮೂಲ ಖಾತೆ ಸರಿಯಾಗುತ್ತದೆ.

ನೀರಾವರಿ ವಿಷಯದಲ್ಲಿ ಎಂ.ಬಿ ಪಾಟೀಲರಿಗೆ ಇರುವ ಬದ್ಧತೆ ಈಗಿನ ಯಾವ ರಾಜಕಾರಣಿಯಲ್ಲೂ ಕಾಣಲ್ಲ. ಇವರಿಗೆ ರೈತರ ಸಮಸ್ಯೆ ಕುರಿತು ಅರಿವಿದೆ. ವಿಜಯಪುರದಂತಹ ಬರದ ನಾಡಿನಿಂದ ಬೆಳೆದು ಬಂದ ಪಾಟೀಲರಿಗೆ ಇಲ್ಲಿನ ಜನ ಅನುಭವಿಸುವ ಕಷ್ಟ ಗೊತ್ತು.
ಕೃಷ್ಣಾ ನದಿ ಪಾತ್ರದಲ್ಲಿ ನೀರಾವರಿ ಯೋಜನೆಗಳನ್ನು ಸಾಕಷ್ಟು ಮಾಡುವ ಅವಕಾಶ ಇದೆ. ಇದೇ ರೀತಿಯಲ್ಲಿ ದಕ್ಷಿಣದ ಹಲವು ಭಾಗಗಳಲ್ಲಿಯೂ ಇವೆ. ಎರಡನ್ನೂ ಒಟ್ಟುಗೂಡಿ ಆಸಕ್ತಿಯಿಂದ ಕೆಲಸ ಮಾಡುವ ವ್ಯಕ್ತಿಗೆ ಜಲಸಂಪನ್ಮೂಲ ಖಾತೆ ಸಿಕ್ಕರೆ ಒಳಿತು.
ಎಂ.ಬಿ ಪಾಟೀಲರಿಗೆ ಜಲಸಂಪನ್ಮೂಲ ಖಾತೆ ಸರಿಯಾಗುತ್ತದೆ. ಈ ಖಾತೆ ಮೇಲೆ ಅವರಿಗೆ ಹಿಡಿತವೂ ಇದೆ. 2013 ರ ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿ ಪಾಟೀಲರು ಅದ್ಬುತ ಕಾರ್ಯ ಮಾಡಿದ್ದಾರೆ. ಬರದ ನಾಡಿಗೆ ನೀರು ಹರಿಸುವ ಮೂಲಕ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.
ದಶಕಗಳಿಂದ ಉಳಿದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ಭದ್ರಾ ಎಡದಂಡೆ ಸೇರಿದಂತೆ ಉತ್ತರ, ದಕ್ಷಿಣದ ಅನೇಕ ಯೋಜನೆಗಳ ಮೇಲೆ ಜನ ಭರವಸೆ ಇಟ್ಟುಕೊಂಡಿದ್ದಾರೆ. ಉತ್ಸಾಹಿ ವ್ಯಕ್ತಿಗೆ ಜಲಸಂಪನ್ಮೂಲ ಖಾತೆ ಕೊಟ್ಟರೆ ಜನರಿಗೂ ಒಳಿತಾದಿತು.
ಎಂ.ಬಿ ಪಾಟೀಲರು ಉತ್ತರ ಕರ್ನಾಟಕ ಭಾಗದಲ್ಲಿ ಮಾಡಿರುವ ನೀರಾವರಿ ಯೋಜನೆಯ ಫಲವಾಗಿ ಇಂದು ಬರಡು ಭೂಮಿಯಲ್ಲಿ ಬಂಗಾರ ಬೆಳೆ ಬೆಳೆಯಬಹುದಾಗಿದೆ. ರೈತರ ಬದುಕಲ್ಲಿ ಬದಲಾವಣೆ ಬಂದಿದೆ. ರಾಮಲಿಂಗಾರೆಡ್ಡಿ ತಿರಸ್ಕರಿಸಿರುವ ಜಲಸಂಪನ್ಮೂಲ ಖಾತೆಯನ್ನು ಎಂ.ಬಿ ಪಾಟೀಲರಿಗೆ ಕೊಟ್ಟರೆ ನಾಡಿಗೆ ಒಳಿತು.



