Uncategorized

ಒಂದು ಬಾರಿ ಕೃಷಿ ಸಚಿವನಾಗಬೇಕು ಎಂಬ ಆಸೆ ಇದೆ- ಎನ್ ಹೆಚ್ ಕೊನರೆಡ್ಡಿ.

40ವರ್ಷದಿಂದ ರೈತರ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ,ಒಂದು ಬಾರಿ ಕೃಷಿ ಸಚಿವನಾಗಬೇಕು ಎಂಬ ಆಸೆ ಇದೆ- ಎನ್ ಹೆಚ್ ಕೊನರೆಡ್ಡಿ.
ಕಳೆದ ನಲವತ್ತು ವರ್ಷಗಳಿಂದ ರೈತ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ರೈತ ಪರ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಒಂದು ಬಾರಿಯಾದ್ರೂ ಕೃಷಿ ಸಚಿವರಾಗಬೇಕು ಎಂಬ ಆಸೆ ಇದೆ, ಅದರ ಕುರಿತು ನಮ್ಮ ಪಕ್ಷದ ನಾಯಕರಿಗೆ ತಿಳಿಸಿದ್ದೇನೆ ಎಂದು ಹೇಳುವ ಮೂಲಕ ನವಲಗುಂದ ಶಾಸಕ ಎನ್ ಹೆಚ್ ಕೊನರೆಡ್ಡಿಯವರು ಸಚಿವಾಕಾಂಕ್ಷಿ ಎಂದು ಹೇಳಿದ್ದಾರೆ. ‌
ಧಾರವಾಡದ ನವಲಗುಂದ ಸ್ವಕ್ಷೇತ್ರದಲ್ಲಿ ಕೇಂದ್ರ ಚುನಾವಣೆ ಆಯೋಗದ ಎಸ್‌ಐಆರ್ ಕುರಿತು ಬಿಎಲ್ಎ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಅವರು, ನಮ್ಮ ರಾಜ್ಯ ನಿಕಟ ಪೂರ್ವ ಸಿಎಂ ಸಿದ್ದರಾಮಯ್ಯನವರು ಹಾಗೂ ಈಗಿನ ನಮ್ಮ ಸಿಎಂ ಡಿಕೆಶಿಯವರು, ಪಕ್ಷದ ಹೈಕಮಾಂಡ ಮುಂದೆ ನಮ್ಮ ಸಚಿವ ಸ್ಥಾನದ ಕುರಿತು ಭೇಟಿ ಮಾಡಿ ಮನವಿ ಬಂದಿದ್ದೇನೆ. ಸಿಎಂ ಡಿಕೆ ಶಿವಕುಮಾರವರ ಸಂಪುಟದಲ್ಲಿ ನಮ್ಮಗೂ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇನೆ.
ಒಂದು ಬಾರಿ ಅವಕಾಶ ಮಾಡಿಕೊಟ್ಟಲ್ಲಿ ಎಲ್ಲರೂ ಮೆಚ್ಚುವಂತೆ ಕೆಲಸ ಮಾಡುವ ಆಸೆ ಇದೆ. ಕೃಷಿ ಇಲಾಖೆ ಮುಖ್ಯವಾಗಿ ಕೇಳಿಕೊಂಡಿದ್ದೇನೆ, ಒಂದು ವೇಳೆ ಬದಲಿ ಖಾತೆ ಕೊಟ್ಟರು ಕೂಡಾ ನಿರ್ವಹಣೆ ಮಾಡುತ್ತೇನೆ ಎಂದು ತಿಳಿಸಿದರು.‌ ಜತೆಗೆ ಕೇಂದ್ರ ಚುನಾವಣೆ ಆಯೋಗ ಎಸ್‌ಐಆರ್ ಮಾಡುವ ಕುರಿತು ಇಂದು ನಾವು ಪಕ್ಷದಿಂದ ನವಲಗುಂದ ಹಾಗೂ ಹುಬ್ಬಳ್ಳಿ ಬಿಎಲ್‌ಎಗಳ ಕಾರ್ಯಾಗಾರ ಕೈಗೊಂಡಿದ್ದು, ಕಾರ್ಯಾಗಾರ ತುಂಬಾ ಯಶಸ್ವಿಯಾಗಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button