Uncategorized
ಹಾಸ್ಟೆಲ್ನಲ್ಲಿ 9ನೇ ತರಗತಿ ಬಾಲಕ ಆತ್ಮಹತ್ಯೆ

ಹಾಸ್ಟೆಲ್ನಲ್ಲಿ 9ನೇ ತರಗತಿ ಬಾಲಕ ಆತ್ಮಹತ್ಯೆ
ಧಾರವಾಡ ತಾಲ್ಲೂಕಿನ ನುಗ್ಗಿಕೇರಿ ಬಳಿಯ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ 9ನೇ ತರಗತಿ ವಿದ್ಯಾರ್ಥಿ ಪ್ರೀತಮ್ ಸಂಗಪ್ಪ ಕಂಪ್ಲಿ (15) ನೇ*ಣಿಗೆ ಶರಣಾಗಿದ್ದಾನೆ. ಮೃತ ಬಾಲಕ ಸವದತ್ತಿ ತಾಲ್ಲೂಕಿನ ಹಿರೇಉಳ್ಳಿಗೇರಿ ಗ್ರಾಮದ ನಿವಾಸಿಯಾಗಿದ್ದಾನೆ.
ಹಾಸ್ಟೆಲ್ನ ಮೂರನೇ ಮಹಡಿಯ ಬಾತ್ರೂಮ್ನಲ್ಲಿ ಬಟ್ಟೆ ಹಾಕುವ ಹ್ಯಾಂಗರ್ಗೆ ತನ್ನದೇ ಟವೆಲ್ನಿಂದ ನೇ*ಣು ಬಿಗಿದುಕೊಂಡು ಬಾಲಕ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ತಕ್ಷಣವೇ ಶಾಲಾ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆತಂದರಾದರೂ, ಮಾರ್ಗಮಧ್ಯದಲ್ಲೇ ಬಾಲಕ ಕೊ*ನೆಯುಸಿರೆಳೆದಿದ್ದಾನೆ.
**ಪೋಷಕರ ಗಂಭೀರ ಆರೋಪ:**
ಮಗನ ಸಾ*ವಿಗೆ ಶಾಲಾ ಆಡಳಿತ ಮಂಡಳಿಯೇ ನೇರ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಆಡಳಿತ ಮಂಡಳಿಯ ಕಿರುಕುಳ ಅಥವಾ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ದೂರಿದ್ದು, ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಪೋಷಕರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ. ಸ್ಥಳೀಯ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



