Uncategorized

ತೆಂಗಿನಕಾಯಿ ಬಿದ್ದು ಮಗು ಸಾವು

ಉಡುಪಿ: ತಾಯಿಯ ಮಡಿಲಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಕಂದಮ್ಮನ ಮೇಲೆ ತೆಂಗಿನಕಾಯಿ ಬಿದ್ದು, ಮೃತಪಟ್ಟಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಹೆರೆಂಜಾಲು ಗ್ರಾಮದಲ್ಲಿ ನಡೆದಿದೆ.
ಪ್ರಶಾಂತ್ ಮತ್ತು ಸುಚಿತ್ರಾ ದಂಪತಿಯ ಒಂದೂವರೆ ವರ್ಷದ ಪುತ್ರ ದಕ್ಷ ಎಂಬಾತನೇ ಮೃತಪಟ್ಟಿರುವ ಮಗು. ಮನೆಯ ಮುಂದೆ ಅಮ್ಮನ ಮಡಿಲಲ್ಲಿ ಆಡುತ್ತದ್ದ ವೇಳೆ ಅಚಾನಕ್‌ ಆಗಿ ತೆಂಗಿನಮರದಿಂದ ಕಾಯಿ ಬಿದಿದ್ದು, ನೇರವಾಗಿ ಮಗುವಿನ ತಲೆಗೆ ಗಾಯಮಾಡಿದೆ. ಕೂಡಲೇ ಸ್ಥಳೀಯರ ಸಹಾಯದಿಂದ ಮಗುವನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಸಾವನಪ್ಪಿದೆ ಎಂದು ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button