Uncategorized
ಅಶ್ಲೀಲ ಮೆಸೇಜ್, ಅಸಭ್ಯ ಫೋಟೋಗಳ ಕಾಟ… ಕೊನೆಗೆ ಜೀವವೇ ಬಲಿ
ಅಶ್ಲೀಲ ಮೆಸೇಜ್, ಅಸಭ್ಯ ಫೋಟೋಗಳ ಕಾಟ… ಕೊನೆಗೆ ಜೀವವೇ ಬಲಿ

ಅಶ್ಲೀಲ ಮೆಸೇಜ್, ಅಸಭ್ಯ ಫೋಟೋಗಳ ಕಾಟ… ಕೊನೆಗೆ ಜೀವವೇ ಬಲಿಯಾದ ಯುವಕ!
ಬಳ್ಳಾರಿ ಮೂಲದ ಬಸವನಗೌಡ ಎಂಬ ಯುವಕ, ಸಂಬಂಧಿಕೆಯಾಗಿದ್ದ ಶ್ವೇತಾಳಿಗೆ ನಿರಂತರವಾಗಿ ಅಶ್ಲೀಲ ಸಂದೇಶಗಳು ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ಎಚ್ಚರಿಸಿದರೂ ವರ್ತನೆ ಬದಲಾಗದ ಹಿನ್ನೆಲೆ, ಶ್ವೇತಾ ತನ್ನ ಗಂಡ ಮತ್ತು ಸಹೋದರನ ಬಳಿ ವಿಷಯ ಹೇಳಿಕೊಂಡಿದ್ದಾಳೆ.
ನಂತರ ಪಕ್ಕಾ ಪ್ಲ್ಯಾನ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡ ಆರೋಪಿಗಳು, ಬಸವನಗೌಡನನ್ನು ಹಗ್ಗ ಬಿಗಿದು ಕೊಲೆ ಮಾಡಿ, ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮೋಕಾ ಸಮೀಪದ ಕಾಲುವೆ ಬಳಿ ಅರೆಬೆಂದ ಶವ ಪತ್ತೆಯಾದ ಪ್ರಕರಣದ ತನಿಖೆಯಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಮಹಿಳೆಯರ ಮೇಲೆ ಆನ್‌ಲೈನ್ ಕಿರುಕುಳ ಎಷ್ಟು ಗಂಭೀರ ಪರಿಣಾಮ ತರುತ್ತದೆ ಎಂಬ ಪ್ರಶ್ನೆ ಮತ್ತೆ ಮೂಡಿಸಿದೆ.



