Uncategorized

ಕಂಠ ಪೂರ್ತಿ ಕುಡಿದ ಪುಡಿ ರೌಡಿಯ ರೌದ್ರಾವತಾರ ಇಬ್ಬರು ಕಾನಸ್ಟೇಬಲ್‌ಗಳ ಮೇಲೆಯೇ ಹಲ್ಲೆ

ಹಳಿಯಾಳನಗರದ ಮೌರ್ಯ ಬಾರ್ ಬಳಿ ಕಂಠಪೂರ್ತಿ ಕುಡಿದುಕೊಂಡು ಪೊಲೀಸ್ ಪೇದೆಗಳಿಗೂ ಥಳಿಸಿ ಸಾರ್ವಜನಿಕರನ್ನು ಅಟ್ಟಾಡಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ ಘಟನೆ ನಡೆದಿದೆ.

 

ಕುಡಿದ ಅಮಲಿನಲ್ಲಿ ಪುಡಿರೌಡಿ ಮಂಜ ಎಂಬಾತ ಗಲಾಟೆ ಮಾಡುತ್ತಿರುವ ಬಗ್ಗೆ ಬಂದ ಕರೆಯನುಸಾರ ಗಲಾಟೆ ತಡೆಯಲು ಬಂದ ಇಬ್ಬರು ಕಾನಸ್ಟೇಬಲ್‌ಗಳ ಮೇಲೆಯೇ ಹಲ್ಲೆ ನಡೆಸಿದ ಆತಂಕಕಾರಿ ದೃಶ್ಯಾವಳಿಗಳು ವೈರಲ್ ಆಗುತ್ತಿದೆ.

ಇನ್ನು ಗಲಾಟೆ ಮಿತಿ ಮೀರುತ್ತಿರುವಂತೆ ಸ್ಥಳಕ್ಕೆ ಬಂದ ಪಿಎಸ್ಸೈ ಪುಡಿ ರೌಡಿಯ ರೌದ್ರಾವತಾರ ಕಂಡು ತಮ್ಮ ವಾಹನದಿಂದಲೂ ಕೆಳಗೆ ಇಳಿಯಲಾಗದೆ ವಾಪಸ್ ಆಗಿರುವ ಘಟನೆ ಆತಂಕಕಾರಿ ಕ್ಷಣಕ್ಕೆ ಸಾಕ್ಷಿಯಾಗಿದೆ.

ಪೊಲೀಸರೇ ಪುಡಿ ರೌಡಿಗಳಿಗೆ ಹೆದರಿದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹೇಗೆ ಎನ್ನುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button