Uncategorized

ಅಪೆಕ್ಸ್ ಕಂಪನಿಯ ಮಾಲೀಕ ಗಿರೀಶ್ ವಾಘಮೋರೆ ವಿರುದ್ಧ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿರುವ ಆರೋಪ ಬೆಳಕಿಗೆ ಬಂದಿದೆ.

ನೀಲಣ್ಣವರ್, ಆದಿತ್ಯರಾಜ್ ಕ್ಯಾಪಿಟಲ್ ದೋಖಾ ಬೆನ್ನಲ್ಲೇ ಮತ್ತೊಂದು ವಂಚನೆಯ ಆಟ ಬಯಲು?
ಬೆಳಗಾವಿ, : ಶಿವಮ್ ಅಸೋಸಿಯೇಟ್ಸ್ ಹಾಗೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆಗಳ ವಿರುದ್ಧ ಬಹುಕೋಟಿ ವಂಚನೆ ಆರೋಪಗಳು ಕೇಳಿಬಂದ ಬೆನ್ನಲ್ಲೇ, ಇದೀಗ ಮತ್ತೊಂದು ಸಂಸ್ಥೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಅಪೆಕ್ಸ್ ಕಂಪನಿಯ ಮಾಲೀಕ ಗಿರೀಶ್ ವಾಘಮೋರೆ ವಿರುದ್ಧ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿರುವ ಆರೋಪ ಬೆಳಕಿಗೆ ಬಂದಿದೆ.
ಹೆಚ್ಚಿನ ಲಾಭದ ಭರವಸೆ ನೀಡಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಅಪೆಕ್ಸ್ ಕಂಪನಿಯು, ಅಗತ್ಯ ಅನುಮತಿ ಮತ್ತು ಪರವಾನಗಿಗಳಿಲ್ಲದೇ ಠೇವಣಿ ಸಂಗ್ರಹಿಸಿದೆ ಎಂಬ ಆರೋಪ ಕೇಳಿಬಂದಿದೆ. ಶಿವಮ್ ಅಸೋಸಿಯೇಟ್ಸ್ ಮಾದರಿಯಲ್ಲೇ ಹೆಚ್ಚಿನ ಲಾಭದ ಆಸೆ ತೋರಿಸಿ ಜನರನ್ನು ಹೂಡಿಕೆಗೆ ಪ್ರೇರೇಪಿಸಲಾಗಿದೆ ಎನ್ನಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪೆಕ್ಸ್ ಕಂಪನಿಯಲ್ಲಿ 35 ಕೋಟಿಗೂ ಅಧಿಕ ಮೊತ್ತ ಹೂಡಿಕೆಯಾಗಿದೆ ಎಂದು ಕಂಪನಿ ಮಾಲೀಕ ಗಿರೀಶ್ ವಾಘಮೋರೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಈ ಹಣದ ಸಂಗ್ರಹ ಪ್ರಕ್ರಿಯೆ ಕಾನೂನುಬದ್ಧವಾಗಿತ್ತೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಇದೀಗ ಈ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಹೂಡಿಕೆದಾರರು ಹಾಗೂ ಸಾರ್ವಜನಿಕ ವಲಯದಿಂದ ಒತ್ತಾಯಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಇಲಾಖೆಗಳು ಪ್ರಕರಣದ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ.
ಸೂಚನೆ: ಅಪೆಕ್ಸ್ ಕಂಪನಿ ಹಾಗೂ ಅದರ ಮಾಲೀಕರ ವಿರುದ್ಧ ವಂಚನೆ ಆರೋಪಗಳು ಕೇಳಿಬಂದಿದ್ದು, ಸಂಬಂಧಿತ ತನಿಖಾ ಸಂಸ್ಥೆಗಳು ಅಧಿಕೃತವಾಗಿ ಆರೋಪಗಳನ್ನು ದೃಢೀಕರಿಸುವುದು ಬಾಕಿಯಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಗಳನ್ನು ಆರೋಪಗಳಾಗಿಯೇ ಪರಿಗಣಿಸಬೇಕು.

Related Articles

Leave a Reply

Your email address will not be published. Required fields are marked *

Back to top button