Uncategorized

ಸಾಮಾಜಿಕ ಕಳಕಳಿ! ಪದ್ಮಶ್ರೀ ನಾನಾ ಚುಡಾಸಮಾ ಜಯಂತಿ ಅಂಗವಾಗಿ ಬೆಳಗಾವಿಯಲ್ಲಿ ಜಾಯಿಂಟ್ಸ್ ಸಂಸ್ಥೆಯಿಂದ ಭವ್ಯ ರಕ್ತದಾನ ಶಿಬಿರ

: * ಕ್ತದಾನದ ಮೂಲಕ ನಾನಾ ಚುಡಾಸಮಾ ಜಯಂತಿ
* ಜಾಯಿಂಟ್ಸ್ ಮೆನ್ ಮತ್ತು ಸಖಿ ಸಹಯೋಗ
* ಕೆಎಲ್‌ಇ ರಕ್ತನಿಧಿಯಲ್ಲಿ 15 ಜನರಿಂದ ರಕ್ತದಾನ
* ಮಹಿಳೆಯರ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ತಜ್ಞರ ಕರೆ

ಜಾಯಿಂಟ್ಸ್ ಮೆನ್ ಬೆಲಗಾಮ್ ಹಾಗೂ ಜಾಯಿಂಟ್ಸ್ ಸಖಿಯ ಜಂಟಿ ಆಶ್ರಯದಲ್ಲಿ ಭಾರತ ರತ್ನ, ಪದ್ಮಶ್ರೀ ನಾನಾ ಚುಡಾಸಮಾ ಅವರ ಜಯಂತಿ ನಿಮಿತ್ತ ಕೆ. ಎಲ್. ಇ. ಡಾ. ಪ್ರಭಾಕರ್ ಕೋರೆ ರಕ್ತನಿಧಿಯಲ್ಲಿ ಭವ್ಯ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸಾಮಾಜಿಕ ಜವಾಬ್ದಾರಿಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 15 ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕಾರ್ಯಕ್ರಮದ ಆರಂಭದಲ್ಲಿ ಪದ್ಮಶ್ರೀ ನಾನಾ ಚುಡಾಸಮಾ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಜಾಯಿಂಟ್ಸ್ ಮೆನ್ ಅಧ್ಯಕ್ಷ ಲಕ್ಷ್ಮಣ್ ಶಿಂದೆ ಮಾತನಾಡಿ, “ರಕ್ತದಾನವೇ ಶ್ರೇಷ…
: ಪರಿಷತ್ ಚುನಾವಣೆಗೆ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಆಪರೇಷನ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಜೆಡಿಎಸ್ ಪಕ್ಷ ಇಂತಹ ಯಾವುದೇ ಆಪರೇಷನ್ ನಡೆಸುತ್ತಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಅವರ ಕೈಯಲ್ಲಿದೆ. ಮ್ಯಾನ್ ಪವರ್, ಮಸಲ್ ಪವರ್, ಹಣದ ಪವರ್ ಎಲ್ಲಾ ಇಟ್ಕೊಂಡವ್ರೆ. ಅವರ ಮುಂದೆ ನಾವು ಫೈಟ್ ಮಾಡಕ್ಕಾಗುತ್ತಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಜೆಡಿಎಸ್ ತನ್ನ ಪಕ್ಷದ ಮತಗಳು ಚಲ್ಲಾಪಿಲ್ಲಿ ಆಗಬಾರದು, ಒಟ್ಟಾಗಿರಬೇಕು ಎಂಬ ಉದ್ದೇಶದಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಗೆಲ್ಲುವ ಉದ್ದೇಶದಿಂದ ಕುತಂತ್ರದ ಮಾರ್ಗ ಅನುಸರಿಸುವ ಪ್ರಶ್ನೆಯೇ ಇಲ್ಲ. ನಮ್ಮ ಅಭ್ಯರ್ಥಿ ಆತ್ಮಸಾಕ್ಷಿ ಮತವನ್ನು ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಸರ್ಪ್ಲಸ್ ಮತಗಳ ಬೆಂಬಲಕ್ಕಾಗಿ ಬಿಜೆಪಿ ನಾಯಕರಿಗೆ ಮನವಿ ಮಾಡಲಾಗಿದೆ. ಇದು ನಮ್ಮ ಮತಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ಸಲುವಾಗಿ ಮಾಡಿದ ಪ್ರಯತ್ನವಷ್ಟೇ ಎಂದವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button