ಆಂಟಿ ಕರೆದ್ಲು ಅಂತಾ ಬಂದವ ದುರಂತ ಕಥೆ!

ಆಂಟಿ ಕರೆದ್ಲು ಅಂತಾ ಬಂದವ ದುರಂತ ಕಥೆ!
ಚಿತ್ರದುರ್ಗದ ರೇಣುಕಾಸ್ವಾಮಿ ಕಥೆಯಂತೆಯೇ ಬಳ್ಳಾರಿಯಲ್ಲೂ ನಡೆದೋಗಿದೆ. ಆ ಕಥೆಯಲ್ಲಿ ಪವಿತ್ರಾ ಗೌಡ, ಈ ಕಥೆಯಲ್ಲಿ ಶ್ವೇತಾ… ಈ ಹೆಣ್ಮಗಳ ಅಂದಕ್ಕೆ ಮರುಳಾದವ ರೇಣುಕಾಸ್ವಾಮಿಯಂತೆ ಕಳಿಸಬಾರದ ಮೆಸೇಜ್ ಕಳಿಸ್ತಿದ್ದ.. ಇದ್ರ ಜೊತೆಗೆ ಅ*ಶ್ಲೀಲ ಫೋಟೋಗಳನ್ನೂ ಸೆಂಡ್ ಮಾಡ್ತಿದ್ದ. ಇದೇ ಈಗ ಈತನ ಜೀಕ್ಕೆ ಸಂಚಕಾರ ತಂದಿದೆ. ಈತನ ಹೆಸರು ಬಸನಗೌಡ ಅಂತಾ.. ಬಳ್ಳಾರಿ ನಿವಾಸಿ.. ಖಾಸಗಿ ಲ್ಯಾಬ್ನಲ್ಲಿ ಕೆಲಸ ಮಾಡ್ತಿದ್ದ.
ಕೆಲ ವರ್ಷಗಳ ಹಿಂದೆ ಈತನ ಅಣ್ಣನಿಗೆ ಈ ಶ್ವೇತಾಳ ತಂಗಿಯನ್ನ ಕೊಟ್ಟು ಮದ್ವೆ ಮಾಡಿದ್ರು. ಹೀಗಾಗಿ ಎರಡೂ ಮನೆಯ ನಡುವೆ ಒಂದೊಳ್ಳೆ ಸಂಬಂಧ ಬೆಸೆದು ಕೊಂಡಿತ್ತು. ಸಂಬಂಧಿಕರು ಅನ್ನೋ ಕಾರಣಕ್ಕೆ ಆಗಾಗ ಬಂದು ಹೋಗ್ತಿದ್ದರು. ಈ ವೇಳೆ ಶ್ವೇತಾಳನ್ನ ನೋಡಿದ್ದವ ಸಂಬಂಧಿ ಅನ್ನೋದನ್ನೂ ಮರೆತು, ಮೋಹಿಸೋದಕ್ಕೆ ಶುರು ಮಾಡಿದ್ದ.
ಹೇಗೋ ನಂಬರ್ ಗಿಟ್ಟಿಸಿಕೊಂಡು ಹಾಯ್ ಬಾಯ್ ಅಂತಾ ಮೆಸೇಜ್ ಶುರು ಮಾಡಿದ್ದಾನೆ. ಇದಕ್ಕೆ ರಿಪ್ಲೇ ಬರದೇ ಇದ್ದಾಗ ಅಸಲಿ ಆಟ ಶುರು ಮಾಡಿದ್ದಾನೆ.. ಅಶ್ಲೀಲ ಸಂದೇಶ ಕಳಿಸೋದ್ರ ಜೊತೆಗೆ ಅಸಭ್ಯ ಫೋಟೋಗಳನ್ನ ಫಾರ್ವರ್ಡ್ ಮಾಡ್ತಿದ್ದ. ಸುಮಾರು ಒಂದೂವರೆ ವರ್ಷದಿಂದ ನಿತ್ಯ ಕಿರುಕುಳ ಕೊಡ್ತಿದ್ದ.
ಹೀಗಾಗಿ ಹೆಣ್ಮಗಳು ತನ್ನ ಗಂಡ ಹಾಗೂ ಸಹೋದರನ ಬಳಿ ಹೇಳಿದ್ದಾರೆ. ಇದ್ರಿಂದ ರೊಚ್ಚಿಗೆದ್ದವ್ರು, ಕಾನೂನಿನ ಮೊರೆ ಹೋಗೋದು ಬಿಟ್ಟು ತಾನೇ ಬುದ್ಧಿಕಲಿಸೋದಕ್ಕೆ ನೋಡಿದ್ದಾರೆ. ಆಂಟಿ ಕೈಯಲ್ಲಿ ಫೋನ್ ಮಾಡಿ ಕರೆಸಿಕೊಂಡಿದ್ದಾನೆ. ಯಾರೂ ಇಲ್ಲದ ಜಾಗದಲ್ಲಿ ಕೊಂ* ಹಾಕಿದ್ದಾರೆ.
#ballary #women #Message



