Uncategorized

ಹೆಸರಿಗೆ ಸ್ಪಾ, ಒಳಗೆ ಅಕ್ರಮ ಸಕ್ಸ್ ದಂದೆ,?

ಹೆಸರಿಗೆ ಸ್ಪಾ, ಒಳಗೆ ಅಕ್ರಮ ಸಕ್ಸ್ ದಂದೆ, ಕಾಮದಾಸೆ ತೀರುವ ವಸ್ತು ಖರೀದಿಗೆ 17 ರ ಯುವಕನ ಬಳಕೆ
ಅಕ್ರಮ ಸೆಕ್ಸ್ ದಂದೆಗೆ ಕಡು – ಬಡ ರೈತರೇ ಟಾರ್ಗೆಟ್
ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೃದಯಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ಅಡ್ಡೆ ಮೇಲೆ ವಡನಾಡಿ ಸಂಸ್ಥೆ, ಎಎಸ್.ಪಿ ಮಂಜುನಾಥ್ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಲಾಗಿದೆ. ಬಾಲಾಜಿ ಅನ್ನೋ ಲಾಡ್ಜ್ ಮೇಲೆ ಪೊಲೀಸರು, ವಡನಾಡಿ ಸಂಸ್ಥೆ ಜಂಟಿ ದಾಳಿ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಲಾಡ್ಜ್ ಮಾಲೀಕರ ಬಂಧಿಸಲಾಗಿದೆ‌. ದಾಳಿ ವೇಳೆ ಮೂವರ ಸಂತ್ರಸ್ಥರು, ನಾಲ್ಕು ಜನ ಕಸ್ಟಮರ್ಸ್ ಸೇರಿ ಏಳು ಜನರ ರಕ್ಷಣೆ ಮಾಡಲಾಗಿದೆ.
ಹೊಸಪೇಟೆಯ ಹೃದಯಭಾಗ ಎಪಿಎಂಸಿ ಬಳಿಯ ಬಾಲಾಜಿ ಲಾಡ್ಜ್ ನಲ್ಲಿ ಅಕ್ರಮ ದಂದೆ ನಡೆಯುತ್ತಿತ್ತು ಅನ್ನೋದು ಗಮನಾರ್ಹ ವಿಚಾರ. ಜೊತೆಗೆ ಎಪಿಎಂಸಿಗೆ ಬರ್ತಿದ್ದ ಬಡ ರೈತರು, ಮಹಿಳೆಯರನ್ನೇ ಬಾಲಾಜಿ ಲಾಡ್ಜ್ ಮಾಲೀಕರು ಟಾರ್ಗೆಟ್ ಮಾಡಿಕೊಂಡಿದ್ರು. ವ್ಯಾಪಾರಕ್ಕೆ ಬರೋ ರೈತರನ್ನೇ ಅಕ್ರಮ ದಂದೆಗೆ ಲಾಡ್ಜ್ ಮಾಲೀಕರು ಸೆಳೆಯುತ್ತಿದ್ರು ಅನ್ನೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ರೈತರು ಎಪಿಎಂಸಿಗೆ ಬಂದಾಗ ತರಕಾರಿ ಮಾರಾಟದಿಂದ ಬಂದ ಹಣ ಮನೆಗೆ ಒಯ್ಯದೇ ಲಾಡ್ಜ್ ನಲ್ಲಿ ಅಕ್ರಮ ದಂದೆಯ ಹಿಂದೆ ಬಿದ್ದು ಹಾಳು ಮಾಡಿಕೊಂಡು ರೈತರು ಹೋಗ್ತಿದ್ರು ಎನ್ನಲಾಗಿದೆ. ಇನ್ನೂ ರೈತರನ್ನ, ಅಮಾಯಕರನ್ನ ಲಾಡ್ಜ್ ಗೆ ಕರೆತರಲು ಲಾಡ್ಜ್ ಮಾಲೀಕರು 17 ವರ್ಷದ ಬಾಲಕನನ್ನ ಬಳಕೆ ಮಾಡ್ತಿದ್ರಂತೆ.
ಸೆಕ್ಸ್ ದಂದೆಗೆ ಬೇಕಾದ ಮಟಿರಿಯಲ್ ಗಳನ್ನೂ ಇದೇ 17ರ ಪೋರನೇ ಖರೀದಿ ಮಾಡಿಕೊಂಡು ಬರ್ತಾಯಿದ್ನಂತೆ. ಕಳೆದ ನಾಲ್ಕೈದು ವರ್ಷದಿಂದ ಬಾಲಕ ಇದೇ ಸಪ್ಲೈ ಕೆಲಸ ಮಾಡ್ತಾಯಿದ್ನಂತೆ. ಸದ್ಯ ಬಾಲಾಜಿ ಲಾಡ್ಜ್ ಮೇಳೆ ದಾಳಿ ವೇಳೆ ಅಪ್ರಾಪ್ತ ಮಾನಸಿಕ ಅಸ್ವಸ್ಥ ಮಗು ಕೂಡಾ ಪತ್ತೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಪ್ರಕರಣವನ್ನು ಸೀರಿಯಸ್ ಆಗಿ ತೆಗರದುಕೊಂಡಿರೋ ವಿಜಯನಗರ ಎಸ್.ಪಿ ಜಾಹ್ನವಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button