Uncategorized
ಮಾಡಿದ ಪಾಪ ಎಲ್ಲಿಗೋಗುತ್ತೆ.. ರಿಟರ್ನ್ ಆಗಲೇಬೇಕು!

ಮಾಡಿದ ಪಾಪ ಎಲ್ಲಿಗೋಗುತ್ತೆ.. ರಿಟರ್ನ್ ಆಗಲೇಬೇಕು!
ಅದಕ್ಕೆ ಹೇಳೋದು ವಿಧಿಯಾಟದ ಮುಂದೆ ನಮ್ಮಾಟ ನಡೆಯಲ್ಲ ಅಂತ. ತಾನೊಂದು ಬಗೆದರೆ ದೈವವೊಂದು ಬಗೆದೀತು ಅಂತಾರಲ್ಲ ಅದು ಇದೇ ಅನ್ಸುತ್ತೆ. 2 ಕೋಟಿ ರೂಪಾಯಿ ಇನ್ಷುರೆನ್ಸ್ ಹಣಕ್ಕಾಗಿ ಕೈಹಿಡಿದ ಗಂಡನನ್ನೇ, ಇಟ್ಟುಕೊಂಡವನ ಜೊತೆ ಸೇರಿ ಕೊಂ*ದು ಮಲಗಿಸಿದ ಐನಾತಿಗೆ ಈಗ ಆ ದೇವರೇ ಇನ್ನೊಂದು ಶಿಕ್ಷೆ ಕೊಟ್ಟಿದ್ದಾನೆ.
#ಬೆಳಗಾವಿ ಜಿಲ್ಲೆ #ಯಮಕನಮರಡಿಯಲ್ಲಿ ನಡೆದಿದ್ದ ಈ ಒಂದು ಘಟನೆ ಯಾವ #ಮಲೆಯಾಳಂ ಥ್ರಿಲ್ಲರ್ ಸಿನಿಮಾಗೂ ಕಮ್ಮಿ ಇರಲಿಲ್ಲ ಬಿಡಿ. ಮುತ್ತಿನಂತ ಗಂಡನನ್ನ ಅದ್ರಲ್ಲೂ ಸೇನೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ಬಂದಿದ್ದ ಸಂದೀಪ್ ಮಂಜರಗಿಯನ್ನ 2 ಕೋಟಿ ರೂಪಾಯಿ ಹಣಕ್ಕಾಗಿ ಸುಮಾ ಮಂಜರಗಿ ಖತರ್ನಾಕ್ ಪ್ಲ್ಯಾನ್ ಮಾಡಿ ಕೊ*ಲೆ ಮಾಡಿದ್ದಳು. ಅಪಘಾತದಿಂದ ಆಸ್ಪತ್ರೆಯ ಬೆಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಗ್ಲೂಕೋಸ್‌ನಲ್ಲಿ ಕ್ರಿಮಿನಾಶಕ ಔಷಧಿ ಸೇರಿಸಿ ಕೊಲೆ ಮಾಡಿದ್ದಳು. ಈ ಕೊಲೆಯ ಶೈಲಿಗೆ ಇಡೀ ಕರ್ನಾಟಕದ ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಅಷ್ಟೇ ಅಲ್ಲ, ವಿಧಿವಿಜ್ಞಾನ ಪರೀಕ್ಷೆ ನಡೆಸೋ ತಜ್ಞರನ್ನೇ ಬುಕ್ ಮಾಡಿಕೊಂಡು, ಮರಣೋತ್ತರ ವರದಿಯನ್ನೇ ತಿರುಚಿ, #ದೃಶ್ಯಂ ಸಿನಿಮಾ ಸ್ಟೈಲ್‌ನಲ್ಲಿ ಬಚಾವಾಗೋ ಪ್ರಯತ್ನ ಮಾಡಿದ್ದಳು. ಆದ್ರೆ ನಮ್ಮ ಪೊಲೀಸರು ಆಕೆಗಿಂತಲೂ ಖತರ್ನಾಕ್ ಆಗಿ ಯೋಚನೆ ಮಾಡಿ, ಆಕೆಯನ್ನ ಬಲೆಗೆ ಬೀಳಿಸಿದ್ದರು. ಆದ್ರೀಗ ಇದಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಮಗಳ ಕೃತ್ಯಕ್ಕೆ ಸಾತ್ ನೀಡಿದ್ದ ತಾಯಿ ಆತ್ಮಹ*ತ್ಯೆ!
ಅತ್ತ ಮಗಳ ಕೃತ್ಯದಿಂದ ಜರ್ಜರಿತರಾಗಿದ್ದ ಆಕೆಯ ತಾಯಿ ಮಹಾದೇವಿ ಬದಾಮಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಈಕೆ ಕೂಡ ಮಗಳ ಕೃತ್ಯದಲ್ಲಿ ಪಾಲುದಾರೆಯಾಗಿದ್ದಳಂತೆ. ಎಲ್ಲಾ ವಿಷಯ ಗೊತ್ತಿದ್ರೂ ಈಕೆ ಪೊಲೀಸರಿಗೆ ಮಾಹಿತಿ ಕೊಟ್ಟಿರಲಿಲ್ಲ. ಅಷ್ಟೇ ಅಲ್ಲ,ಮಗಳನ್ನ ಪಾರು ಮಾಡೋದಕ್ಕೆ ಕಮಿಷನರ್ ಕಛೇರಿಯಲ್ಲಿ ಕೆಲಸ ಮಾಡ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರನ್ನ ಪರಿಚಯ ಮಾಡ್ಕೊಂಡು, ಅವ್ರ ಮೂಲಕ FSL ಅಧಿಕಾರಿಗಳಿಗೆ ಗಾಳ ಹಾಕಿದ್ಲು. ನಂತರ ಅಳಿಯನ ಸಾ*ವಿನ ವರದಿಯನ್ನೇ ಬದಲಿಸಿ ಹಾರ್ಟ್ ಅಟ್ಯಾಕ್ ಅಂತಾ ಷರಾ ಬರೆಸಿದ್ಲು.
ಮಾಡಿದ ಪಾಪ ಎಲ್ಲಿ ಸುಮ್ಮನೆ ಬಿಡುತ್ತೆ ಹೇಳಿ. ಮಗಳ ಈ ಪಾಪದ ಕೃತ್ಯದಿಂದ ಊರಿನಲ್ಲಿ ತಲೆ ಎತ್ತಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತೀವ್ರ ಮನನೊಂದ ಮಹಾದೇವಿ #ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿರುವ ತಮ್ಮ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ.
ಹಣದ ಹಿಂದೆ ಹೊರಟ ಮಗಳು ಜೈಲು ಸೇರಿದ್ದಾಳೆ. ಮಗಳ ರಕ್ಷಣೆಗೆ ಹೋದ ತಾಯಿ ಪ್ರಾಣ ಬಿಟ್ಟಿದ್ದಾಳೆ. ಅದಕ್ಕೇ ಹೇಳೋದು ಕರ್ಮ ರಿಟರ್ನ್ಸ್ ಅಂತ ಅಲ್ವೇ..?
ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ



