Uncategorized

ಕೆಎಲ್ಇ ಬೆಲ್ಲದ ಕಾನೂನು ಪದವಿ ಮಹಾವಿದ್ಯಾಲಯ ಬೆಳಗಾವಿ.. ಲಿಂಗ ಸಮಾನತೆ ಮತ್ತು ಸಂವೇದನಾಶೀಲತೆಯತ್ತ ಒಂದು ಹೆಜ್ಜೆ…

ಕೆಎಲ್ಇ ಬೆಲ್ಲದ ಕಾನೂನು ಪದವಿ ಮಹಾವಿದ್ಯಾಲಯ ಬೆಳಗಾವಿ..
ಲಿಂಗ ಸಮಾನತೆ ಮತ್ತು ಸಂವೇದನಾಶೀಲತೆಯತ್ತ ಒಂದು ಹೆಜ್ಜೆ…
ದಿನಾಂಕ 18 ಜೂನ್ 2026ರಂದು ಬೆಳಗಾವಿಯ ಸುಪ್ರಸಿದ್ಧ ಕೆ. ಎಲ್. ಇ. ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ (Chief Resource Person) ಭಾಗವಹಿಸುವ ಹೆಮ್ಮೆಯ ಅವಕಾಶ ನನ್ನದಾಗಿತ್ತು.
ನನ್ನ ಎರಡು ಮಾತು…
ಪ್ರಸ್ತುತ ಸಮಾಜಕ್ಕೆ ಅತ್ಯಂತ ಅಗತ್ಯವಿರುವ ‘ಲಿಂಗ ಸಮಾನತೆ ಮತ್ತು ಲಿಂಗ ಸಂವೇದನಾಶೀಲತೆ’ (Gender Equality and Gender Sensitization) ಎಂಬ ವಿಷಯದ ಕುರಿತು ಅಲ್ಲಿ ನೆರೆದಿದ್ದ ಪ್ರಬುದ್ಧ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರೊಂದಿಗೆ ಸಂವಾದ ನಡೆಸಿದ್ದು, ನನ್ನ ಆಲೋಚನೆಗಳನ್ನು ಹಂಚಿಕೊಂಡಿದ್ದು ಅತ್ಯಂತ ಸಂತೋಷ ಮತ್ತು ತೃಪ್ತಿಯನ್ನು ನೀಡಿದೆ. ಕಾನೂನು ಕಲಿಯುವ ಯುವ ಮನಸ್ಸುಗಳಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಭವಿಷ್ಯದ ಸಮಾನ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಬಲ್ಲದು ಎಂಬ ನಂಬಿಕೆ ನನ್ನದು.
“ಕೇವಲ ಕಾನೂನು ಪುಸ್ತಕಗಳಲ್ಲಿ ಲಿಂಗ ಸಮಾನತೆಯನ್ನು ಹುಡುಕುವುದಕ್ಕಿಂತ, ಅದನ್ನು ಪ್ರತಿಯೊಬ್ಬರ ದೈನಂದಿನ ಆಲೋಚನೆ ಮತ್ತು ನಡವಳಿಕೆಯಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ಕಾನೂನು ವಿದ್ಯಾರ್ಥಿಗಳು ಇದರ ರಾಯಭಾರಿಗಳಾಗಬೇಕು.”
ಇದು ಕೇವಲ ಮಹಿಳಾ ಸಬಲೀಕರಣಕ್ಕೆ ಸೀಮಿತವಾಗಿರದೆ, ಸಮಾಜದ ಎಲ್ಲಾ ಲಿಂಗದವರನ್ನು (LGBTQ+ ಸಮುದಾಯ ಸೇರಿದಂತೆ) ಗೌರವದಿಂದ ಕಾಣುವ ಮತ್ತು ಅವರ ಹಕ್ಕುಗಳನ್ನು ಮಾನ್ಯ ಮಾಡುವ ವಿಶಾಲ ಮನೋಭಾವವನ್ನು ಬೆಳೆಸುತ್ತದೆ.
ಲಿಂಗ ಸಮಾನತೆಯು ಕೇವಲ ಸಾರ್ವಜನಿಕ ವೇದಿಕೆಗಳಲ್ಲಷ್ಟೇ ಅಲ್ಲದೆ, ಪ್ರತಿಯೊಬ್ಬರ ಮನೆಯ ಒಳಾಂಗಣದಿಂದ, ಹೆಣ್ಣು-ಗಂಡೆಂಬ ಭೇದವಿಲ್ಲದ ಪಾಲನೆಯಿಂದ ಆರಂಭವಾಗಬೇಕು.
ಮಹಾವಿದ್ಯಾಲಯದ ಪ್ರಾಚಾರ್ಯರು ಜ್ಯೋತಿ ಹಿರೇಮಠ ಹಾಗೂ ಪ್ರೊಫೆಸರ್ ಸವಿತಾ ಅವರಿಗೆ ನನ್ನ ವಿಶೇಷ ದನ್ಯವಾದಗಳು

Related Articles

Leave a Reply

Your email address will not be published. Required fields are marked *

Back to top button