Uncategorized

ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡಾ ಜಲಾಶಯ ನಿರ್ವಹಣೆ ಮಾಡುವ ನೀರಾವರಿ ಇಲಾಖೆ ನಿಗಮದ ಕಛೇರಿಗೆ ಶಾಖ ಕೊಟ್ಟ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ.

ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡಾ ಜಲಾಶಯ ನಿರ್ವಹಣೆ ಮಾಡುವ ನೀರಾವರಿ ಇಲಾಖೆ ನಿಗಮದ ಕಛೇರಿಗೆ ಶಾಖ ಕೊಟ್ಟ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ.
ಹೌದು ಕಳೆದ ನಾಲ್ಕು ವರ್ಷದಿಂದ ನೀರಾವರಿ ನಿಗಮ ವಿದ್ಯುತ್ ಬಿಲ್ ಪಾವತಿ ಮಾಡದೆ ಸುಮಾರು 1 ಕೋಟಿ 98 ಲಕ್ಷ ರೂಪಾಯಿ ಬಾಕಿ ಉಳಿಸಿದ ಹಿನ್ನೆಲೆಯಲ್ಲಿ ಇಂದು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ನಿಗಮದ ಮುಖ್ಯ ಆಡಳಿತ ಕಛೇರಿ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಿ ಬಿಸಿ ಮುಟ್ಟಿಸಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಘದ ಅದ್ಯಕ್ಷ ಮಹಾವೀರ ನಿಲಜಗಿ ಕಳೆದ 2022 ರಿಂದ ಇಲ್ಲಿಯವರೆಗೆ ವಿದ್ಯುತ್ ಬಿಲ್ ಪಾವತಿ ಮಾಡದ ನಿರಾವರಿ ಇಲಾಖೆಗೆ ಹಲವಾರು ಬಾರಿ ನೋಟಿಸ್ ನೀಡಿ ಬಿಲ್ ಪಾವತಿಸಲು ಗಡವು ನಿಡಲಾಗಿತ್ತು ಆದರೆ ಅಧಿಕಾರಿಗಳು ಇದಕ್ಕೆ ಸ್ಪಂದನೆ ಮಾಡದ ಕಾರಣ ಹಾಗೂ ಸಹಕಾರಿ ಸಂಘದ ಹಿತ ದೃಷ್ಟಿಯಿಂದ ಸಂಘಕ್ಕೆ ಬರಬೇಕಾದ ಬಾಕಿ ವಸೂಲಿಗಾಗಿ ಕಛೇರಿಯ ವಿದ್ಯುತ್ ಸಂಪರ್ಕ ಕಟ್ ಮಾಡಿ ಬಿಸಿ ಮುಟ್ಟಿಸಲಾಗಿದೆ ಎಂದರು ( )
ನಿರ್ದೆಶಕ ಪೃಥ್ವಿ ಕತ್ತಿ ಮಾತನಾಡಿ ಸಂಘದ ಹಿತದೃಷ್ಟಿಯಿಂದ ಆಡಳಿತ ನಿರ್ವಹಣೆಗಾಗಿ ಬಾಕಿ ಬಿಲ್ ವಸೂಲಿ ಮಾಡುವದು ಅನಿವಾರ್ಯ ಕಾರಣ ಕೋಟ್ಯಾಂತರ ಬಿಲ್ ಬಾಕಿ ಇರುವ ನೀರಾವರಿ ಇಲಾಖೆ ಕಛೇರಿ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ ಕೂಡಲೇ ಅಧಿಕಾರಿಗಳು ಹಂತ ಹಂತ ವಾಗಿ ಬಿಲ್ ಪಾವತಿ ಮಾಡಿ ಸಂಪರ್ಕ ಪಡೆದುಕೋಳ್ಳ ಬೇಕು ಎಂದರು ( )
ವಿದ್ಯುತ್ ಇಲ್ಲದೆ ಜಲಾಶಯ ನಿರ್ವಹಣೆ ಮಾಡುವ ಮುಖ್ಯ ಕಛೇರಿಯ ಕಂಪ್ಯೂಟರ್, ಪ್ಯಾನ್ ಮತ್ತು ಬಲ್ಬಗಳು ಉರಿಯದೆ ಆಡಳಿತ ಸ್ಥಗಿತ ಗೊಂಡಿದೆ, ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಕಛೇರಿ ಪ್ರಭಾರಿ ಅಧೀಕ್ಷಕ ಅಭಿಯಂತರ ಮಕರಂದ ಪೆಡ್ನೇಕರ ರವರ ಗಮನಕ್ಕೆ ಬಂದ ತಕ್ಷಣ ಕಛೇರಿ ಕಾರ್ಯನಿರ್ವಾಹಕ ಅಭಿಯಂತರಾದ ಜಗದೀಶ ಮತ್ತು ಶ್ರೀಮಂತ ಕಾಂಬಳೆ ಯವರಿಗೆ ನೋಟಿಸ್ ನೀಡಿ ಬಿಲ್ ವಿಳಂಬಕ್ಕೆ ಕಾರಣ ಕೇಳಿದ್ದಾರೆ ಹಾಗೂ ಕೂಡಲೇ ಹತ್ತು ವಿಭಾಗಗಳ ಕಛೇರಿ ಮುಖ್ಯಸ್ಥರು ವಿದ್ಯುತ್ ಸಹಕಾರಿ ಸಂಘಕ್ಕೆ ಬಾಕಿ ಬಿಲ್ ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಜಲಾಶಯ ಪರಿಸರದಲ್ಲಿ ಹಲವಾರು ವರ್ಷಗಳಿಂದ ನಿರರುಪಯುಕ್ತ ಖಾಲಿ ಇರುವ ಸಿಬ್ಬಂದಿ ವಸತಿ ನಿಲಯಗಳ ವಿದ್ಯುತ್ ಬಿಲ್ ಪಾವತಿ ಮಾಡದೆ ಇರುವದರಿಂದ ಈ ರೀತಿ ಬಿಲ್ ಬರುತ್ತಿದ್ದು ಸಂಬಂದಿಸಿದ ಅಧಿಕಾರಿಗಳು ಈ ಕುರಿತು ಕ್ರಮ ಜರುಗಿಸದೆ ನಿರ್ಲಕ್ಷ್ಯ ತೊರಿದ್ದರಿಂದ ಈಗ ವಿದ್ಯುತ್ ಸಂಘ ಈ ಕ್ರಮ ಕೈಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button