Uncategorized

ಸುರಭಿ ತಾಯಿಯ ಕೊಲೆಗೂ ಸಂಚು ರೂಪಿಸಿದ್ದ ಲವ್ ಜಿಹಾದಿ ಸಂಜಿತ್ ಆಲಿ?! ಪಾರ್ಟಿಯಲ್ಲೇ ನಡೆದಿತ್ತು ಭೀಕರ ದಾಳಿ!

ಸುರಭಿ ತಾಯಿಯ ಕೊಲೆಗೂ ಸಂಚು ರೂಪಿಸಿದ್ದ ಲವ್ ಜಿಹಾದಿ ಸಂಜಿತ್ ಆಲಿ?! ಪಾರ್ಟಿಯಲ್ಲೇ ನಡೆದಿತ್ತು ಭೀಕರ ದಾಳಿ!
ಸುಂದರಿ ಸುರಭಿ ಕೊಲೆಯಾಗಿ ಕೆಲವೇ ದಿನಗಳು ಕಳೆಯುವಷ್ಟರಲ್ಲಿ, ಆಕೆಯ ಸಾವಿನ ಹಿಂದಿರುವ ಒಂದೊಂದೇ ಆಘಾತಕಾರಿ ರಹಸ್ಯಗಳು ಹೊರಬರುತ್ತಿವೆ. ಕ್ಯಾಬ್ ಚಾಲಕ ಸಂಜಿತ್ ಆಲಿಯ ಅಸಲಿ ಮುಖವಾಡ ಈಗ ಕಳಚಿಬೀಳುತ್ತಿದೆ. ಲಿವ್-ಇನ್ ಪಾರ್ಟ್‌ನರ್ ಸುರಭಿಯ ಹೆಜ್ಜೆಯನ್ನು ಬೆನ್ನಟ್ಟಿದ್ದ ಪೊಲೀಸರು ಈಗ ಆಲಿಯ ಹಳೆಯ ಇತಿಹಾಸವನ್ನು ಜಾಲಾಡುತ್ತಿದ್ದು, ಆತ ಸುರಭಿಯ ತಾಯಿಯನ್ನೇ ಮುಗಿಸಲು ಸ್ಕೆಚ್ ಹಾಕಿದ್ದ ಭಯಾನಕ ಸಂಗತಿ ಬಯಲಾಗ್ತಿದೆ! ಹೆಣ್ಣಿನ ವ್ಯಾಮೋಹಕ್ಕೆ ಬಿದ್ದಿದ್ದ ಈತ, ಆಕೆಯ ತಾಯಿಯ ಜೀವ ತೆಗೆಯಲು ಮುಹೂರ್ತ ಇಟ್ಟಿದ್ದ ಎಂಬ ವಿಚಾರ ಸದ್ದು ಮಾಡುತ್ತಿದೆ!
ಖಾಕಿ ಎಚ್ಚರಿಕೆಯನ್ನೂ ಕಡೆಗಣಿಸಿದ್ದ ರಣರಾಕ್ಷಸ!
ವರ್ಷದ ಹಿಂದೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ಸಂಜಿತ್ ಆಲಿ, ಅಲ್ಲಿಯೇ ಸುರಭಿಯ ಪರಿಚಯ ಮಾಡಿಕೊಂಡು ಒಟ್ಟಿಗೆ ಇರಲು ಶುರು ಮಾಡಿದ್ದ. ಇವರ ಜೊತೆಗೆ ಮಿಥುನ್ ಮ್ಯಾಥ್ಯೂ ಎಂಬಾತ ಕೂಡ ವಾಸವಾಗಿದ್ದ. ಮಗಳ ಈ ಅಕ್ರಮ ಸಂಬಂಧ ಹೆತ್ತ ತಾಯಿಗೆ ಒಪ್ಪಿಗೆ ಇರಲಿಲ್ಲ. ಹೀಗಾಗಿ ಅವರು ಬನಶಂಕರಿ ಪೊಲೀಸ್ ಠಾಣೆ ಹಾಗೂ ಜಯನಗರ ಎಸಿಪಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಕರೆಸಿ ಖಡಕ್ ವಾರ್ನಿಂಗ್ ಕೊಟ್ಟಾಗ, “ಸುರಭಿ ಜೀವನಕ್ಕೆ ನಾನೇ ಜವಾಬ್ದಾರ, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟು ಬಂದಿದ್ದ. ಆದರೆ, ಇದಾಗಿ ಕೆಲವೇ ತಿಂಗಳುಗಳಲ್ಲಿ ಆತ ತನ್ನ ಅಸಲಿ ನರರಾಕ್ಷಸ ರೂಪವನ್ನು ತೋರಿಸಲು ಶುರು ಮಾಡಿದ್ದ.
ಮದ್ಯದ ಅಮಲಿನಲ್ಲಿ ತಾಯಿಯ ಕೊಲೆಗೆ ಪ್ಲ್ಯಾನ್.. ಅಡ್ಡಬಂದವನ ಕಣ್ಣಿಗೆ ಏರ್ ಗನ್ ಶೂಟೌಟ್!
ಒಟ್ಟಿಗೆ ವಾಸವಿದ್ದ ಇವರ ಮನೆಯಲ್ಲಿ ಮದ್ಯದ ಪಾರ್ಟಿ ನಿರಂತರವಾಗಿ ನಡೆಯುತ್ತಿತ್ತು. 2025ರ ಅಕ್ಟೋಬರ್ ತಿಂಗಳಿನಲ್ಲಿ ಆಲಿ, ಸುರಭಿ ಮತ್ತು ಮ್ಯಾಥ್ಯೂ ಮೂವರೂ ಸೇರಿ ಕುಡಿಯಲು ಕುಳಿತಿದ್ದರು. ಮದ್ಯದ ಅಮಲು ತಲೆಗೇರುತ್ತಿದ್ದಂತೆ ಸುರಭಿ ತಾಯಿಯ ಮೇಲಿನ ದ್ವೇಷ ಹೊರಹಾಕಿದ ಆಲಿ, “ಅವಳನ್ನು ಇವತ್ತೇ ಮುಗಿಸಿಬಿಡೋಣ” ಎಂದು ಸುರಭಿ ಮುಂದೆಯೇ ಜಂಭ ಕೊಚ್ಚಿಕೊಂಡಿದ್ದ. ಆದರೆ ಅಲ್ಲೇ ಇದ್ದ ಮಿಥುನ್ ಮ್ಯಾಥ್ಯೂ ಇದನ್ನು ತೀವ್ರವಾಗಿ ವಿರೋಧಿಸಿದ್ದ. “ಸುರಭಿ ತಾಯಿ ನನಗೂ ತಾಯಿಯ ಸಮಾನ, ಕೊಲೆ ಮಾಡಲು ಬಿಡುವುದಿಲ್ಲ” ಎಂದು ಜಗಳಕ್ಕೆ ನಿಂತಿದ್ದ. ಇದರಿಂದ ರೊಚ್ಚಿಗೆದ್ದ ಆಲಿ, ತನ್ನ ಬಳಿಯಿದ್ದ ಏರ್ ಗನ್ ತಂದು ಶೂಟ್ ಮಾಡುವುದಾಗಿ ಬೆದರಿಸಿದ್ದಲ್ಲದೆ, ಮಾತಿಗೆ ಮಾತು ಬೆಳೆದು ನೇರವಾಗಿ ಗುಂಡು ಹಾರಿಸಿಯೇ ಬಿಟ್ಟಿದ್ದ! ಗನ್‌ನಿಂದ ಚಿಮ್ಮಿದ ಗುಂಡು ಮ್ಯಾಥ್ಯೂ ಕಣ್ಣಿಗೆ ತಗುಲಿ ರಕ್ತದ ಕೋಡಿ ಹರಿದಿತ್ತು. ಅಷ್ಟಕ್ಕೇ ನಿಲ್ಲದ ಕಾಮುಕ ಸುರಭಿಯ ಮೇಲೂ ಹಲ್ಲೆ ನಡೆಸಿದ್ದ. ಇದರಿಂದ ಹೆದರಿ ಬೆದರಿದ ಸುರಭಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ಕೊನೆಗೂ ದಕ್ಕಿತು ಕಾಲನ ಕರೆ!
ಅಂದು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಆಲಿಯನ್ನು ಬಂಧಿಸಿ ಎರಡು ತಿಂಗಳು ಜೈಲಿಗಟ್ಟಿದ್ದರು. ಜೈಲಿನಿಂದ ಬಂದ ಮೇಲೆ ಸುರಭಿ ಆತನಿಂದ ದೂರಾಗಿದ್ದಳು. ಆದರೆ, ಕಳೆದ ಆರೇಳು ತಿಂಗಳಿನಲ್ಲಿ ಇಬ್ಬರ ನಡುವೆ ಮತ್ತೆ ಪ್ರೀತಿ ಚಿಗುರಿದ್ದು ಹೇಗೆ ಎಂಬುದು ಸದ್ಯದ ಯಕ್ಷಪ್ರಶ್ನೆ. ವಿಧಿಯ ಆಟ ನೋಡಿ, ಅದೇ ಸಂಜಿತ್ ಆಲಿ ಜೊತೆ ಸಂಜೆ ಹೊತ್ತಿನಲ್ಲಿ ಹೋಂಸ್ಟೇ ಸೇರಿದಾಕೆ, ಅಲ್ಲಿಂದ ಹೆಣವಾಗಿ ಹೊರಬಂದಿದ್ದಾಳೆ. ಸುರಭಿ ಸಾವಿನ ಪ್ರತಿಯೊಂದು ಹೆಜ್ಜೆಯಲ್ಲೂ ಆಲಿಯ ಕೈವಾಡವಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಕ್ರೂರ ಮನಸ್ಥಿತಿಯ ಆಲಿಗೆ ತಕ್ಕ ಶಿಕ್ಷೆಯಾಗಬೇಕಿದೆ.

Related Articles

Leave a Reply

Your email address will not be published. Required fields are marked *

Back to top button